ಧಾರವಾಡ ಅಂಜುಮನ್ ಅಧ್ಯಕ್ಷ, ಕಾಂಗ್ರೇಸ್ ಮುಖಂಡ ಇಸ್ಮಾಯಿಲ್ ತಮಟಗಾರ ಅವರಿಗೆ ವಿಧಾನ ಪರಿಷತ್ ಟಿಕೇಟ್ ನೀಡಲು ಕಾಂಗ್ರೇಸ್ ಹೈಕಮಾಂಡ ಗ್ರೀನ್ ಸಿಗ್ನಲ್ ನೀಡಿದೆ.
ನಾಳೆ ಸಂಜೆ ಬೆಂಗಳೂರಿನಲ್ಲಿ ನಡೆಯುವ ಪತ್ರಿಕಾಗೋಷ್ಟಿಯಲ್ಲಿ ಇಸ್ಮಾಯಿಲ್ ತಮಟಗಾರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
ಮೂರು ಸಲ ಧಾರವಾಡ ಪಶ್ಚಿಮ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಇಸ್ಮಾಯಿಲ್ ತಮಟಗಾರ ಪರಾಭವಗೊಂಡಿದ್ದರು. ಮೂರು ಸಲ ಸೋಲಿನ ರುಚಿ ಕಂಡರು ಸಹ ಇಸ್ಮಾಯಿಲ್ ತಮಟಗಾರ ಪಕ್ಷದ ಸಂಘಟನೆಯಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡಿದ್ದರು.
ಇದೆಲ್ಲವನ್ನು ಗಮನಿಸಿರುವ ಕಾಂಗ್ರೇಸ್ ಹೈಕಮಾಂಡ ಉತ್ತರ ಕರ್ನಾಟಕದಲ್ಲಿ ಮುಸ್ಲಿಮ್ ನಾಯಕತ್ವ ಬೆಳೆಸುವ ಉದ್ದೇಶದಿಂದ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ಇಸ್ಮಾಯಿಲ್ ತಮಟಗಾರ ಅದೃಷ್ಟ ಖುಲಾಯಿಸಿದೆ.
