ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಹಾರ ಜೈಲಿಗೆ ಮರಳಿದ್ದಾರೆ. ದೆಹಲಿಯ ಅಬಕಾರಿ ನೀತಿ ಪ್ರಕರಣದಲ್ಲಿ ವಂಚನೆ ಆರೋಪದ ಮೇಲೆ ಮಾರ್ಚ್ 21 ರಂದು ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿತ್ತು. ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಮೇ 10ರಂದು ಸುಪ್ರೀಂ ಕೋರ್ಟ್, ಅವರಿಗೆ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿತ್ತು.
ಜೈಲಿಗೆ ಹೋಗುವ ಮುನ್ನ ಅರವಿಂದ ಕೇಜ್ರಿವಾಲ ತಮ್ಮ ತಂದೆ ತಾಯಿಯವರಿಗೆ ನಮಸ್ಕರಿಸಿ ಮನೆಯಿಂದ ಹೊರಟರು. ಮಾರ್ಗ ಮಧ್ಯೆ ಹನುಮಾನ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಅಲ್ಲಿಂದ ನೇರವಾಗಿ ರಾಜಘಾಟ ತಲುಪಿದ ಅರವಿಂದ ಕೇಜ್ರಿವಾಲ್ ಮಹಾತ್ಮ ಗಾಂಧಿಯವರ ಸಮಾಧಿ ಸ್ಥಳದಲ್ಲಿ ಗೌರವ ಸಮರ್ಪಿಸಿದರು. ಮಧ್ಯಾಹ್ನ 3 ಘಂಟೆಯ ಸುಮಾರಿಗೆ ತಿಹಾರ ಜೈಲ್ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಅವರ ಪತ್ನಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕರು ಅರವಿಂದ ಕೇಜ್ರಿವಾಲ್ ರನ್ನು ಬಿಳ್ಕೋಟ್ಟರು.