ಇಂಡಿಯಾ ಟುಡೇ ಮತ್ತು ಆಕ್ಸಿಸ್ ಸಂಸ್ಥೆ ನಡೆಸಿದ ಮತಗಟ್ಟೆ ಸಮೀಕ್ಷೆ ( exit poll ) ನಲ್ಲಿ ಪ್ರಾದೇಶಿಕ ಪಕ್ಷವೊಂದು ಸ್ಪರ್ಧೆ ಮಾಡಿದ್ದಕ್ಕಿಂತ ಹೆಚ್ಚು ಗೆಲ್ಲುವ ಸ್ಥಾನಗಳನ್ನು ತೋರಿಸಲಾಗಿದೆ. ರಾಮವಿಲಾಸ ಪಾಸ್ವಾನ್ ಅವರ ಮಗ ಚಿರಾಗ ಪಾಸ್ವಾನ್ ರ ಪಕ್ಷದ LJP ಬಿಹಾರದಲ್ಲಿ ಕೇವಲ 5 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದೆ.
ಆದರೆ ಇಂಡಿಯಾ ಟುಡೇ ಹಾಗೂ ಆಕ್ಸಿಸ್ ನೀಡಿರುವ ಸಮೀಕ್ಷೆಯಲ್ಲಿ ಬಿಹಾರದಲ್ಲಿ LJP 4 ರಿಂದ 6 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಿದೆ. ಅಲ್ಲದೆ ಮತಗಟ್ಟೆ ಸಮೀಕ್ಷೆ ನಡೆಸಿದವರು ಎಷ್ಟು ಜನರ ಆಭಿಪ್ರಾಯ ( sample ) ಪಡೆದಿದ್ದಾರೆ ಮತ್ತು ಯಾವ ಯಾವ ವಯಸ್ಸಿನವರನ್ನು ಮಾತನಾಡಿಸಿದ್ದಾರೆ ಅನ್ನೋದನ್ನ ಎಲ್ಲಿಯೂ ಹೇಳಿಲ್ಲ.
ಈ ಸಮೀಕ್ಷೆಗಳು ಸಂಶಯ ಹುಟ್ಟಿಸಿದ್ದು, ಇಂಡಿಯಾ ಒಕ್ಕೂಟದಲ್ಲಿರುವ ಪಕ್ಷಗಳು ಸಮೀಕ್ಷೆ ಬಹಿರಂಗವಾಗುವದಕ್ಕು ಮುಂಚೆಯೇ ಮತಗಟ್ಟೆ ( exit poll ) ಸಮೀಕ್ಷೆಗಳನ್ನು ತಿರಸ್ಕರಿಸಿದ್ದಾರೆ.
ಬಿಹಾರದಲ್ಲಿ ಬಿಜೆಪಿ 17 ಲೋಕಸಭಾ ಕ್ಷೇತ್ರಗಳಲ್ಲಿ, ಎನ್ ಡಿ ಎ ಮೈತ್ರಿ ಪಕ್ಷ ಜೆಡಿ(ಯೂ ) 16 ಕ್ಷೇತ್ರಗಳಲ್ಲಿ ಮತ್ತು ಚಿರಾಗ ಪಾಸ್ವಾನ್ ರ LJP 5 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. LJP 5 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಸಮೀಕ್ಷೆಯಲ್ಲಿ 4 ರಿಂದ 6 ಸ್ಥಾನಗಳಲ್ಲಿ ಅದು ಗೆಲ್ಲಲಿದೆ ಎಂದು ತಿಳಿಸಿದ್ದು, ಈ ಸಮೀಕ್ಷೆಯಲ್ಲಿ ಅಂಕಿ ಸಂಖ್ಯೆಗಳು ಗೊಂದಲ ಮೂಡಿಸಿವೆ ಅಷ್ಟೇ ಅಲ್ಲ ಸಂಶಯಕ್ಕೆ ಕಾರಣವಾಗಿದೆ.