ಧಾರವಾಡ ಜಿಲ್ಲೆಯ ಅಂಜುಮನ್ ಸಂಸ್ಥೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಧಾರವಾಡ ಅಂಜುಮನ್ ಸಂಸ್ಥೆಗೆ ಅವಿರೋಧವಾಗಿ ಆಯ್ಕೆಯಾಗಿದ್ದ ಇಸ್ಮಾಯಿಲ್ ತಮಟಗಾರರನ್ನು ರಾಜಕೀಯವಾಗಿ ಮುಗಿಸಲು ಷ್ಯಡ್ಯಂತ್ರ ನಡೆಯುತ್ತಿದೆ.
ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಮುಸ್ಲಿಮ್ ನಾಯಕತ್ವ ಬೆಳೆಯುತ್ತದೆ ಅನ್ನೋ ಕಾರಣಕ್ಕೆ ಕೈ ಕಟ್ಟಿ ಹಾಕಿದರಾಯ್ತು ಎಂದು ಇಸ್ಮಾಯಿಲ್ ತಮಟಗಾರಗೆ ಟಿಕೇಟ್ ತಪ್ಪಿಸಲಾಗಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ಮುಸ್ಲಿಮ್ ರ ಓಟು ಪಡೆದು ಆಯ್ಕೆಯಾಗಿರುವ ಧಾರವಾಡ ಜಿಲ್ಲೆಯ ಶಾಸಕರಾದ ವಿನಯ ಕುಲಕರ್ಣಿ, ಎನ್ ಎಚ್ ಕೋನರೆಡ್ಡಿ, ಪ್ರಸಾದ ಅಬ್ಬಯ್ಯ, ಸಂತೋಷ ಲಾಡ್ ಕೂಡಲೇ ಪಕ್ಷದ ಹೈಕಮಾಂಡ ಮೇಲೆ ಒತ್ತಾಯ ತಂದು ಇಸ್ಮಾಯಿಲ್ ತಮಟಗಾರಗೆ ವಿಧಾನ ಪರಿಷತ್ ಟಿಕೇಟ್ ನೀಡಬೇಕೆಂದು ಮುಸ್ಲಿಮ್ ಮುಖಂಡರು ಆಗ್ರಹಿಸಿದ್ರು.
ಧಾರವಾಡದ ವಿವೇಕಾನಂದ ಸರ್ಕಲನಲ್ಲಿ ನಡೆದ ಪ್ರತಿಭಟನೆಯಲ್ಲಿ ಅಂಜುಮನ್ ಉಪಾಧ್ಯಕ್ಷ ಬಶೀರ್ ಜಾಗೀರದಾರ, ಖಾದಿರ್ ಸರ್ಗಿರೋ, ಕಾರ್ಯದರ್ಶಿ ಶಫಿ ಕಳ್ಳಿಮನಿ, ಜಂಟಿ ಕಾರ್ಯದರ್ಶಿ ರಫೀಕ್ ಶಿರಹಟ್ಟಿ, ಖಾಜಾಂಚಿ ಎಂ.ಎ.ಪಠಾಣ್, ಮುಖಂಡರಾದ ರಫೀಕ್ ಬಿಸ್ತಿ, ಇರ್ಷಾದ್ ಬಿಸ್ತಿ, ಸಲೀಮ್ ಸಂಗನಮುಲ್ಲಾ ಭಾಗವಹಿಸಿದ್ದರು.