ಕರ್ನಾಟಕದ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೇಸ್ ಮತ್ತೆ ಉತ್ತರ ಕರ್ನಾಟಕದ ಮುಸ್ಲಿಮ್ ಸಮುದಾಯಕ್ಕೆ ಅನ್ಯಾಯ ಎಸಗಿದೆ.
ಕೇವಲ ಮುಸ್ಲಿಮ್ ವೋಟ್ ಪಡೆಯಲು ಮುಂದಾಗುವ ಕಾಂಗ್ರೇಸ್, ಉತ್ತರ ಕರ್ನಾಟಕ ಭಾಗದ ಮುಸ್ಲಿಮ್ ಸಮುದಾಯವನ್ನು ನಿರ್ಲಕ್ಷ ಮಾಡಿದೆ.
ಇಂದು ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಹೆಸರೆ ಕೇಳಿರದ ಬಿಲ್ಕಿಸ್ ಬಾನು ಎಂಬುವವರಿಗೆ ಟಿಕೇಟ್ ನೀಡಿದೆ.
ಉತ್ತರ ಕರ್ನಾಟಕದಿಂದ ಬಹಳಷ್ಟು ಮುಸ್ಲಿಂ ನಾಯಕರು ಸಮರ್ಥ ಅಭ್ಯರ್ಥಿ ಇದ್ದರು ಸಹ, ಯಾರನ್ನು ಪರಿಗಣಿಸದೆ ಇರುವದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.
ಮುಸ್ಲಿಮ್ ರು ಕಾಂಗ್ರೇಸ್ ಬಿಟ್ಟು ಯಾರಿಗೆ ಮತ ಹಾಕ್ತಾರೆ ಬಿಡಿ ಅನ್ನೋ ಲೆಕ್ಕದಲ್ಲಿ ಕಾಂಗ್ರೇಸ್ ನಾಯಕರು ತಿಳಿದುಕೊಂಡಂತೆ ಕಾಣುತ್ತಿದ್ದು, ಕಡೆ ಘಳಿಗೆಯಲ್ಲಿ ಇಸ್ಮಾಯಿಲ್ ತಮಟಗಾರ ಹೆಸರು ಕೈಬಿಡಲಾಗಿದೆ. ಇದರ ಹಿಂದೆ ಜಿಲ್ಲೆಯ ಕಾಂಗ್ರೇಸ್ ಶಾಸಕರುಗಳ ಕೈವಾಡವಿದ್ದು, ಅವರೇ ರಾಜಕೀಯ ಆಟ ಆಡಿದ್ದಾರೆ ಎಂದು ಸಮುದಾಯದ ಜನ ಮಾತನಾಡಿಕೊಳ್ಳುತ್ತಿದ್ದಾರೆ.