ತೀವ್ರ ಕುತೂಹಲ ಮೂಡಿಸಿರುವ ಧಾರವಾಡ ಲೋಕಸಭಾ ಚುನಾವಣೆ ಫಲಿತಾಂಶ ನಾಳೆ ಹೊರಬೀಳಲಿದೆ. ರಾಜ್ಯದ ಪ್ರತಿಷ್ಟಿತ ಕಣದಲ್ಲಿ ಒಂದಾಗಿರುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಇಂದ ಹಾಲಿ ಸಂಸದ ಪ್ರಲ್ಲಾದ ಜೋಶಿ ಮತ್ತು ಕಾಂಗ್ರೇಸ್ಸಿನಿಂದ ವಿನೋದ ಅಸೂಟಿ ಸ್ಪರ್ಧೆ ಮಾಡಿದ್ದಾರೆ.
ಯಾರು ಗೆಲ್ತಾರೆ ಅನ್ನೋದು ನಾಳೆ ಸಂಜೆ ಹೊತ್ತಿಗೆ ಗೊತ್ತಾಗಲಿದೆ. ಬಿಜೆಪಿ ಹಾಗು ಕಾಂಗ್ರೇಸ್ ಪರವಾಗಿ ಕೋಟಿ ಕೋಟಿ ಬೆಟ್ಟಿಂಗ್ ನಡೆದಿದೆ. ಧಾರವಾಡ ಲೋಕಸಭಾ ಕ್ಷೇತ್ರದ ಫಲಿತಾಂಶ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಬೆಂಬಲಿಗರು ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.