ದೇಶದಾಧ್ಯಂತ ಸೋಮವಾರದಿಂದ ಟೋಲ್ ದರ ಹೆಚ್ಚಳವಾಗಲಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಟೋಲ್ ದರ ಏರಿಕೆಯನ್ನು ತಡೆ ಹಿಡಿದಿದ್ದ ಹೆದ್ದಾರಿ ಪ್ರಾಧಿಕಾರ ಚುನಾವಣಾ ಫಲಿತಾಂಶಕ್ಕು ಮುನ್ನ ಮತ್ತೆ ಏರಿಕೆ ಮಾಡಿದೆ.
ಟೋಲ್ ಶುಲ್ಕವನ್ನು ಶೇಕಡಾ 3 ರಿಂದ 5 ರ ವೆರೆಗೆ ಏರಿಕೆಯಾಗಲಿದೆ. ದೇಶದಲ್ಲಿ 1100 ಟೋಲ್ ಗಳಿದ್ದು, ಏಕಕಾಲಕ್ಕೆ ಎಲ್ಲ ಟೋಲ್ ಗಳಲ್ಲಿ ಶುಲ್ಕ ಏರಿಕೆಯಾಗಲಿದೆ.
ಟೋಲ್ ದರ ಏರಿಕೆಯಿಂದ ಪ್ರಯಾಣಿಕರಿಗೂ ಹೆಚ್ಚಿನ ಹೊರೆ ಬೀಳಲಿದೆ. ಅಲ್ಲದೆ ಅಗತ್ಯ ವಸ್ತುಗಳ ಬೆಲೆಯಲ್ಲಿಯೂ ಮತ್ತಷ್ಟು ಏರಿಕೆಯಾಗಲಿದ್ದು, ಜನಸಾಮಾನ್ಯರಿಗೆ ಬಿಸಿ ತಟ್ಟಲಿದೆ.
ಹೆದ್ದಾರಿ ನಿರ್ಮಿಸಲು ಶತಕೋಟಿ ಹಣ ಹೂಡಿಕೆ ಮಾಡಿದ್ದು, ಅದನ್ನೆಲ್ಲ ಲೆಕ್ಕ ಹಾಕಿ ಟೋಲ್ ಶುಲ್ಕ ಹೆಚ್ಚಳ ಮಾಡಲಿದೆ. ಭಾರತದಲ್ಲಿ 2022-23 ರ ಅವಧಿಯಲ್ಲಿ 540 ಶತಕೋಟಿ ರೂಪಾಯಿ ಸಂಗ್ರಹಣೆಯಾಗಿದೆ.