Download Our App

Follow us

Home » ಭಾರತ » ಧಾರವಾಡ ಲೋಕಸಭಾ ಕ್ಷೇತ್ರ. ವಿನೋದ ಅಸೂಟಿ ಸೋಲಿನ ಹೊಣೆ ಹೊರುವವರಾರು ?

ಧಾರವಾಡ ಲೋಕಸಭಾ ಕ್ಷೇತ್ರ. ವಿನೋದ ಅಸೂಟಿ ಸೋಲಿನ ಹೊಣೆ ಹೊರುವವರಾರು ?

ಧಾರವಾಡ ಲೋಕಸಭಾ ಕ್ಷೇತ್ರದ ಫಲಿತಾಂಶ ಕಾಂಗ್ರೇಸ್ಸಿನವರ ಕಸುವನ್ನು, ಕನಸನ್ನು ನುಚ್ಚು ನೂರು ಮಾಡಿದೆ. ಭಾರಿ ವಿರೋದದ ಮದ್ಯೆಯೂ, ಧಾರ್ಮಿಕ ಯುದ್ಧದ ಕರೆಯ ನಡುವೆಯೂ ಪ್ರಲ್ಲಾದ ಜೋಶಿ ಐದನೇ ಬಾರಿ ಗೆದ್ದು ಬೀಗಿದ್ದಾರೆ. 

ಧಾರವಾಡ ಲೋಕಸಭಾ ಕ್ಷೇತ್ರಗಳ 8 ವಿಧಾನಸಭಾ ವ್ಯಾಪ್ತಿಯಲ್ಲಿ ನಾಲ್ವರು ಬಿಜೆಪಿ ಮತ್ತು ನಾಲ್ವರು ಕಾಂಗ್ರೇಸ್ಸಿನ ಶಾಸಕರಿದ್ದು, ಬಿಜೆಪಿ ಈ ಕ್ಷೇತ್ರದಲ್ಲಿ ಧಾಖಲೆಯ ವಿಜಯ ಸಾಧಿಸಿದೆ. 

ಕಾಂಗ್ರೇಸ್ ಶಾಸಕರರಿರುವ ನವಲಗುಂದ ಹಾಗೂ ಹುಬ್ಬಳ್ಳಿ ಪೂರ್ವ ಮೀಸಲು ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ವಿನೋದ ಅಸೂಟಿಗೆ ಕ್ರಮವಾಗಿ ನವಲಗುಂದ ಕ್ಷೇತ್ರದಲ್ಲಿ ಬಿಜೆಪಿಗಿಂತ 17212 ಮತಗಳ ಮುನ್ನಡೆ ಸಿಕ್ಕರೆ, ಹುಬ್ಬಳ್ಳಿ ಪೂರ್ವ ಮೀಸಲು ಕ್ಷೇತ್ರದಲ್ಲಿ ಬಿಜೆಪಿಗಿಂತ ಕಾಂಗ್ರೇಸ್ಸಿಗೆ 26776 ಮತಗಳ ಮುನ್ನಡೆ ಸಿಕ್ಕಿದೆ. ನವಲಗುಂದದಲ್ಲಿ ನಿರೀಕ್ಷಿತ ಮಟ್ಟದ ಮತ ಬರದೇ ಇರುವದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. 

ಬಿಜೆಪಿ ಶಾಸಕರಿರುವ ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೇಸ್ 16 ಗುಂಪುಗಳಲ್ಲಿ ಹರಿಡಿಕೊಂಡಿದ್ದರು, ಅಲ್ಲಿನ ನಾಯಕರು ಒಗ್ಗಟ್ಟಾಗಿ ಬಿಜೆಪಿ ಅಭ್ಯರ್ಥಿಗೆ ಕೇವಲ 1660 ಲೀಡ್ ಕೊಟ್ಟಿದ್ದಾರೆ. 

ಕಾಂಗ್ರೇಸ್ಸಿನ ವಿನಯ ಕುಲಕರ್ಣಿ ಪ್ರತಿನಿಧಿಸುವ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿಯೂ ಕಾಂಗ್ರೇಸ್ಸಿಗೆ ಹಿನ್ನೆಡೆಯಾಗಿದೆ. ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಗೆ 21316 ಲೀಡ್ ಸಿಕ್ಕಿದೆ. ಈ ಕ್ಷೇತ್ರದಲ್ಲಿ ವಿನಯ ಕುಲಕರ್ಣಿಯವರಿಗೆ ಅಲ್ಲಿನ ಮತದಾರ ಎಚ್ಚರಿಕೆ ರವಾನಿಸಿದ್ದಾನೆ. 

ಹುಬ್ಬಳ್ಳಿಯ ಕಾಂಗ್ರೇಸ್ಸಿನ ಬಹುತೇಕ ನಾಯಕರು ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದವರಾಗಿದ್ದರು ಸಹ ಅಲ್ಲಿಯೂ ಕಾಂಗ್ರೇಸ್ ಅಭ್ಯರ್ಥಿಗೆ ಅತ್ಯಂತ ಕಡಿಮೆ ಮತಗಳು ಬಂದಿವೆ. ಕಾಂಗ್ರೇಸ್ ಅಭ್ಯರ್ಥಿ ವಿರುದ್ಧ ಬಿಜೆಪಿಯ ಪ್ರಲ್ಲಾದ ಜೋಶಿಯವರಿಗೆ 113086 ಮತಗಳು ಬಂದಿದ್ದು, ಅವರಿಗೆ ಆ ಕ್ಷೇತ್ರದಲ್ಲಿ 51 ಸಾವಿರದಾ 326 ಲೀಡ್ ಸಿಕ್ಕಿದೆ. 

ಹು-ಧಾ ಪಶ್ಚಿಮ ಕ್ಷೇತ್ರದಲ್ಲಿಯೂ ಕಾಂಗ್ರೇಸ್ ಕಳಪೆ ಪ್ರದರ್ಶನ ಮಾಡಿದೆ. ಪ್ರಲ್ಹಾದ್ ಜೋಶಿಯವರಿಗೆ 113086 ಮತಗಳು ಬಿದ್ದರೆ, ಕಾಂಗ್ರೇಸ್ಸಿನ ವಿನೋದ ಅಸೂಟಿಯವರಿಗೆ – 71498 ಮತಗಳು ಬಂದಿವೆ. ಇಲ್ಲಿಯೂ ಸಹ ಬಿಜೆಪಿಗೆ 41 ಸಾವಿರದಾ 588 ಮತಗಳ ಲೀಡ್ ಸಿಕ್ಕಿದೆ.

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಪ್ರತಿನಿಧಿಸುವ ಕಲಘಟಗಿ ಕ್ಷೇತ್ರದಲ್ಲಿ ಬಿಜೆಪಿ 96 ಸಾವಿರದಾ 402 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿಗೆ 32737 ಲೀಡ್ ಸಿಕ್ಕಿದೆ. 

ಸಾಧನೆ ಎಂದರೆ, ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಸಂಸದ ಬಸವರಾಜ ಬೊಮ್ಮಾಯಿ ಕ್ಷೇತ್ರ ಶಿಗ್ಗಾವದಲ್ಲಿ ಕಾಂಗ್ರೇಸ್ಸಿಗೆ 8598 ಮತಗಳ ಲೀಡ್ ಸಿಕ್ಕಿದೆ.

8 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೇಸ್ಸಿಗೆ ಲೀಡ್ ಸಿಕ್ಕಿದ್ದು, ಕಾಂಗ್ರೇಸ್ ಶಾಸಕರು ಇರುವ ಧಾರವಾಡ ಗ್ರಾಮೀಣ ಹಾಗೂ ಕಲಘಟಗಿ ಕ್ಷೇತ್ರದಲ್ಲಿ ಕಾಂಗ್ರೇಸ್ ಕಳಪೆ ಪ್ರದರ್ಶನ ಮಾಡಿದೆ.

ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ನಾಯಕರು ಒಗ್ಗಟ್ಟಿನ ಪ್ರದರ್ಶನ ಮಾಡಿದ್ದರು ಸಹ ಸೋಲಾಗಿದ್ದು, ಸೋಲಿನ ಹೊಣೆ ಹೊತ್ತುಕೊಳ್ಳುವರಾರು ಎಂದು ಪ್ರಶ್ನಿಸಲಾಗುತ್ತಿದೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!