ಬೆಂಗಳೂರು ಹೊರತುಪಡಿಸಿದ್ರೆ ಹುಬ್ಬಳ್ಳಿ ಇದೀಗ ಎರಡನೇ ರಾಜಕೀಯ ಶಕ್ತಿ ಕೇಂದ್ರ ಅನ್ನೋದು ಮತ್ತೆ ಸಾಬೀತಾಗಿದೆ.
ಬೆಳಗಾವಿಯಿಂದ ಗೆದ್ದಿರುವ ಜಗದೀಶ ಶೆಟ್ಟರ, ಹಾವೇರಿಯಿಂದ ಗೆದ್ದಿರುವ ಬಸವರಾಜ ಬೊಮ್ಮಾಯಿ, ಮತ್ತು ಧಾರವಾಡ ಕ್ಷೇತ್ರದಿಂದ ಗೆದ್ದಿರುವ ಪ್ರಲ್ಲಾದ ಜೋಶಿ ಹುಬ್ಬಳ್ಳಿಯವರಾಗಿದ್ದಾರೆ.
ಜಗದೀಶ ಶೆಟ್ಟರ ಅವರು ಬೆಳಗಾವಿಯಲ್ಲಿ ಮನೆ ಮಾಡಿದರು ಸಹ ಅವರ ಮೂಲ ಮನೆ ಹುಬ್ಬಳ್ಳಿಯ ಕೇಶ್ವಾಪುರದಲ್ಲಿದೆ. ಬಸವರಾಜ ಬೊಮ್ಮಾಯಿ ಅವರ ಮೂಲ ಮನೆ ಹುಬ್ಬಳ್ಳಿಯ ಅಶೋಕ ನಗರದಲ್ಲಿದೆ.
ಹುಬ್ಬಳ್ಳಿಯಿಂದ ರಾಜಕೀಯವಾಗಿ ಬೆಳೆದು ಬಂದಿರುವ ಈ ಮೂವರು ನಾಯಕರು ರಾಜ್ಯದ ಬೇರೆ ಬೇರೆ ಕ್ಷೇತ್ರಗಳಿಂದ ಗೆದ್ದಿದ್ದು, ಕರ್ನಾಟಕದ ರಾಜಕೀಯದಲ್ಲಿ ಧಾಖಲೆ ಮಾಡಿದ್ದಾರೆ. ಈ ಮೂವರು ನಾಯಕರು ಬಿಜೆಪಿಯಿಂದ ಆಯ್ಕೆಯಾಗಿದ್ದು ಮತ್ತೊಂದು ವಿಶೇಷ.
