ಈ ಸಲದ ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆ ರಂಗೇರಿದ್ದು ಸುಳ್ಳಲ್ಲ. ಮೇಲ್ನೋಟಕ್ಕೆ ವಿನೋದ ಅಸೂಟಿ ಕಾಂಗ್ರೇಸ್ ಅಭ್ಯರ್ಥಿಯಾಗಿದ್ದರು ಸಹ fight between ಮಿಸ್ಟರ್ ಸಂತೋಷ ಲಾಡ್ & ಪ್ರಲ್ಲಾದ ಜೋಶಿ ಅನ್ನುವಷ್ಟರ ಮಟ್ಟಿಗೆ ನಡೆದಿತ್ತು.
ಹೌದು, ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆ ರಣಕಹಳೆಯನ್ನು ಅಷ್ಟರ ಮಟ್ಟಿಗೆ ಮೊಳಗಿಸಿದ್ದ ಸಂತೋಷ ಲಾಡ, ಸೋಷಿಯಲ್ ಮಿಡಿಯಾ ದಲ್ಲಿ ಟ್ರೆಂಡಿಂಗ್ ಆದ್ರು. ಪ್ರಧಾನಿ ಹಾಗು ಬಿಜೆಪಿ ನಾಯಕರಿಗೆ, ಲಾಡ್, ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳ್ತಾ ಇದ್ದರೆ ಎದುರಾಳಿ ಬಿಜೆಪಿಯವರು ಲಾಡ್ ಅವರು ಕೇಳಿದ ಪ್ರಶ್ನೆಗೆ ವ್ಯತಿರಿಕ್ತ ಉತ್ತರ ಕೊಡ್ತಾ ಇದ್ರು.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಂಚಿಂಗ್ ಡೈಲಾಗ್ ಹೊಡೆಯುತ್ತಿದ್ದ ಸಂತೋಷ ಲಾಡ್, ಇದೇ ಮೊದಲ ಬಾರಿಗೆ ಧಾರವಾಡ ಲೋಕಸಭಾ ಚುನಾವಣೆ ರಾಜ್ಯದ ಗಮನ ಸೆಳೆಯುವಂತೆ ಮಾಡಿದ್ದು ದೇವರ ಆಣೆಗೂ ಸುಳ್ಳಲ್ಲ.
ವಿನೋದ ಅಸೂಟಿಗೆ ಟಿಕೇಟ್ ಸಿಗುತ್ತಿದ್ದಂತೆ ಧಾರವಾಡದಲ್ಲಿ ಉಳಿದಿದ್ದ ಸಂತೋಷ್ ಲಾಡ್, ರಣತಂತ್ರ ಹೆಣೆದ್ರು. 10 ರಿಂದ 15 ದಿನಗಳ ಕಾಲ ಖಾಸಗಿ ಹೋಟೆಲ್ ನಲ್ಲಿ ಸಭೆ ಮೇಲೆ ಸಭೆ ನಡೆಸಿದ್ರು. ಆರಂಭದಲ್ಲಿ ಒಂದೆರೆಡು ಸಭೆ ಪ್ರಮುಖ ಹಾಗೂ ಜವಾಬ್ದಾರಿ ನಾಯಕರಿಂದ ತುಂಬಿತ್ತು. ಆದ್ರೆ ಸಂಘಟನೆ ಜೋರಾಗುತ್ತಿದ್ದಂತೆ ಕೆಲ ಕಾಂಗ್ರೇಸ್ ನಾಯಕರಲ್ಲಿ ಮತ್ಸರ ಆರಂಭವಾಯ್ತು. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಗೆದ್ದರೆ, ಗೆಲ್ಲಿಸಿದ ಕೀರ್ತಿ ಯಾರ ಪಾಲಾಗತ್ತೆ, ಯಾರಿಗೆ ಈ ಕೀರ್ತಿ ಹೋಗತ್ತೆ ? ನಮ್ಮ ಪರಿಸ್ಥಿತಿ ಮುಂದೇನು? ಇದನ್ನೆಲ್ಲಾ ಲೆಕ್ಕ ಹಾಕಿಯೇ ಕೆಲವರು ಸಚಿವ ಲಾಡ್ ರ ಹತ್ತಿರ ಸುಳಿಯಲೇ ಇಲ್ಲಾ. ಈ ಮಾತನ್ನು ಖುದ್ದು ಲಾಡ್ ಅವರು ತಮ್ಮ ಅಪ್ತ ವಲಯದ ಬಳಿ ಬೇಸರದಿಂದ ಹೇಳಿಕೊಂಡಿದ್ದಾರೆ.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿಗೆ 6 ಲಕ್ಷದ ವರೆಗೆ ಮತಗಳೇನು ಬಂದಿವೆ. ಹೆಚ್ಚುವರಿ ಮತಗಳು ಬಂದಿದ್ದು ತಮ್ಮಿಂದ ಎಂದು ಕೆಲ ನಾಯಕರು ಹೇಳ್ತಾ ಹೊರಟಿದ್ದಾರೆ. ಆಕಸ್ಮಾತ್ ಕಾಂಗ್ರೇಸ್ ಅಭ್ಯರ್ಥಿ ವಿನೋದ ಅಸೂಟಿ ಗೆದ್ರೆ, ಅದರ ಕೀರ್ತಿ ಸಂತೋಷ ಲಾಡ್ ರಿಗೆ ಹೋಗುತ್ತದೆ ಅನ್ನೋ ಕಾರಣಕ್ಕೆ, ಅವರ ಪ್ರತಿಷ್ಟೆಗೆ ಪೆಟ್ಟು ಹಚ್ಚಲು ನಡಿತು ಕುತಂತ್ರ ಎಂದು ಪಕ್ಷದ ಎರಡನೇ ಹಂತದ ನಾಯಕರು ಮಾತನಾಡಿಕೊಳ್ಳುತ್ತಿದ್ದಾರೆ.
