ಧಾರವಾಡ ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಕಾಂಗ್ರೇಸ್ ಹಾಗೂ ಬಿಜೆಪಿ ಕಾರ್ಯಕರ್ತರು ಎಲ್ಲೆಲ್ಲಿ ಕಡಿಮೆ ಮತಗಳು ಬಂದಿವೆ ಅನ್ನೋದರ ಬಗ್ಗೆ ಕಟ್ಟೆ ಕುಂತು ಚರ್ಚೆ ನಡೆಸಿದ್ದಾರೆ.
ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸ್ವಗ್ರಾಮ ಅಮರಗೋಳದಲ್ಲಿ, ಅಮರಗೋಳದ ಮೂರು ಮತಗಟ್ಟೆಗಳ ಪೈಕಿ ಎರಡು ಮತಗಟ್ಟೆಯಲ್ಲಿ ಬಿಜೆಪಿಗೆ ದೊಡ್ಡ ಬೆಂಬಲ ಸಿಕ್ಕಿದೆ. ಬೂತ್ ನಂಬರ 21 ರಲ್ಲಿ ಪ್ರಲ್ಲಾದ ಜೋಶಿಯವರಿಗೆ 432 ಮತಗಳು ಮತ್ತು ಬೂತ್ ನಂಬರ್ 22 ರಲ್ಲಿ 336 ಮತಗಳು ಸಿಕ್ಕಿದ್ದು ಬೂತ್ ನಂಬರ 23 ರಲ್ಲಿ ಕಾಂಗ್ರೇಸ್ಸಿಗಿಂತ ಎರಡು ಮತಗಳು ಅಂದರೆ 326 ಮತಗಳು ಬಿಜೆಪಿಗೆ ಬಂದಿವೆ. ಅಷ್ಟರ ಮಟ್ಟಿಗೆ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಮ್ಮ ಸ್ವಗ್ರಾಮದಲ್ಲಿ ಬಿಜೆಪಿಗೆ ಬಲ ತಂದು ಕೊಟ್ಟಿದ್ದಾರೆ.
ಇನ್ನು ನವಲಗುಂದದ ಕಾಂಗ್ರೇಸ್ ಶಾಸಕ ಎನ್ ಎಚ್ ಕೋನರೆಡ್ಡಿಯವರ ಸ್ವಗ್ರಾಮ ಚಿಲಕವಾಡದ ಬೂತ್ ಸಂಖ್ಯೆ 117 ರಲ್ಲಿ ಬಿಜೆಪಿಗೆ 280 ಮತ ಮತ್ತು ಕಾಂಗ್ರೇಸ್ ಅಭ್ಯರ್ಥಿ ವಿನೋದ ಅಸೂಟಿಯವರಿಗೆ 575 ಮತಗಳು ಬಂದಿವೆ. ಎನ್ ಎಚ್ ಕೋನರೆಡ್ಡಿಯವರು ವಿಧಾನಸಭೆಗೆ ಸ್ಪರ್ಧೆ ಮಾಡಿದಾಗ ಅವರಿಗೆ 680 ಮತಗಳು ಬಂದಿದ್ದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ಸಿಗೆ 105 ಮತಗಳು ಕಡಿಮೆ ಬಂದಿವೆ.
