ನಾಳೆ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಬೆಳಿಗ್ಗೆ 10-30 ಕ್ಕೆ ಕೆ ಪಿ ಸಿ ಸಿ ಕಚೇರಿಗೆ ಆಗಮಿಸಲಿರುವ ರಾಹುಲ್ ಗಾಂಧಿ ಲೋಕಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಜೊತೆ ಸಮಾಲೋಚನೆ ಮಾಡಲಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚು ಸ್ಥಾನ ನಿರೀಕ್ಷೆ ಮಾಡಿದ್ದ ರಾಹುಲ್ ಗಾಂಧಿ, ಸೋಲಿಗೆ ಕಾರಣ ಏನು ಅನ್ನೋದನ್ನ ಅಭ್ಯರ್ಥಿಗಳಿಂದ ತಿಳಿದುಕೊಳ್ಳಲಿದ್ದಾರೆ.
ಪರಾಜಿತ ಅಭ್ಯರ್ಥಿಗಳಿಗೆ ಕೆ ಪಿ ಸಿ ಸಿ ಕಚೇರಿಯಿಂದ ಸಂದೇಶ ಬಂದಿದ್ದು, ನಾಳಿನ ಸಭೆಯಲ್ಲಿ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ.
