ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಪರ ಮಿಂಚಿನ ಪ್ರಚಾರ ಕೈಗೊಂಡಿದ್ದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಅವರ ತವರು ಕ್ಷೇತ್ರ ಕಲಘಟಗಿ ಮತದಾರ ಎಚ್ಚರಿಸಿದ್ದಾನೆ.
ಕಲಘಟಗಿ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ವಿನೋದ ಅಸೂಟಿ ವಿರುದ್ಧ ಬಿಜೆಪಿಗೆ 32 ಸಾವಿರದಾ 737 ಹೆಚ್ಚು ಮತಗಳು ಸಿಕ್ಕಿದ್ದು, ಮರಾಠಾ ಸಮುದಾಯ ಸಂತೋಷ ಲಾಡ್ ಬೆನ್ನಿಗೆ ನಿಲ್ಲದಿರುವದು ಸೋಜಿಗ ಮೂಡಿಸಿದೆ.
2019 ರ ಚುನಾವಣೆಯಲ್ಲಿ ಕಲಘಟಗಿಯಲ್ಲಿ ನಿಂತು ಸೋತಾಗಲು ಕುಗ್ಗದ ಸಂತೋಷ ಲಾಡ್, ಕ್ಷೇತ್ರದ ಮತದಾರರ ಜೊತೆ ನಿಕಟ ಸಂಪರ್ಕ ಹೊಂದಿದ್ದರು. 2023 ರ ಚುನಾವಣೆಯಲ್ಲಿ
ಸುಮಾರು 18 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಬರುವ ಕಲಘಟಗಿ ವಿಧಾನಸಭೆ ಚುನಾವಣೆ ಸಂತೋಷ ಲಾಡರಿಗೆ ಅಷ್ಟು ಸಲಿಸಲ್ಲ ಎಂದು ಮಾತನಾಡಿಕೊಳ್ಳಲಾಗುತ್ತಿದ್ದು, ಬಿಜೆಪಿ ದಿನಗಳೆದಂತೆ ಬಲಿಷ್ಟವಾಗುತ್ತಿದೆ ಅನ್ನೋದಕ್ಕೆ ಈ ಫಲಿತಾಂಶ ಸಾಕ್ಷಿಯಾಗಿದೆ.
