ತಮ್ಮ ಬರಹದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕರ್ನಾಟಕದ ಖ್ಯಾತ ಸಾಹಿತಿಯೊಬ್ಬರು ಕಾಮದ ವಿಷಯದ ಹಿಂದೆ ಬಿದ್ದಿದ್ದಾರೆ.
ಖ್ಯಾತ ಕಾದಂಬರಿಕಾರ ಹಾಗೂ ಸಾಹಿತ್ಯ ಕ್ಷೇತ್ರದ ದಿಗ್ಗಜ ಎಸ್ ಎಲ್ ಭೈರಪ್ಪನವರು ಇತ್ತೀಚಿಗೆ, ಜೀವನದ ವಿವಿಧ ಹಂತಗಳಲ್ಲಿ ಗಂಡು,ಹೆಣ್ಣು ಬಯಸುವ ಪ್ರೀತಿ, ಪ್ರೇಮ, ಸಾಂತ್ವನ, ವಾತ್ಸಲ್ಯಗಳ ಬಗ್ಗೆ ಹೆಚ್ಚೆಚ್ಚು ಬರೆಯುತ್ತಿದ್ದಾರೆ.
ಎಕ್ಸ್ ನಲ್ಲಿ ಬರೆದುಕೊಂಡಿರುವ ಅವರು “ಕಾಮಕ್ಕಾಗಿ ಆದ ಮದುವೆ, ಕಾಮ ಬತ್ತಿದ ಮೇಲೆ ಕಳಚಿ ಬೀಳಲೇಬೇಕು! ” @ ನೆಲೆ. ಎಂದು ಬರೆದು ಮತ್ತೆ ಗಮನ ಸೆಳೆದಿದ್ದಾರೆ.
ಅಲ್ಲದೇ, ” ಎಂತ ಸುಂದರಿಯಾದರು ಮನಸ್ಸು ಮುರಿದ ಮೇಲೆ ಕುರೂಪಿಯಾಗಿಯೇ ಕಾಣುತ್ತಾಳೆ. ” ಮಧುಮಿತಾ ಮಂದ್ರ ”
“ಹೆಣ್ಣು ತ್ಯಾಗಕ್ಕೆ ಕರುಣೆಗೆ ಹೆಸರಾದವಳು ಅಂತೆಲ್ಲಾ ಹೇಳುವುದಕ್ಕೆ ಆಗುವುದಿಲ್ಲ. ಹಸಿದವನಿಗೆ ತೀರಾ ಅಂದರೆ, ಭಿಕ್ಷುಕರಿಗೆ ಊಟ ಹಾಕಬಲ್ಲಳು. ತನ್ನಲ್ಲಿರುವುದನ್ನೆಲ್ಲಾ ಇತರರಿಗೆ ಕೊಡುವುದಕ್ಕೆ ಹೋಗುವುದಿಲ್ಲ. ಮಕ್ಕಳಿದ್ದರಂತೂ ಎಲ್ಲ ಅವರಿಗಾಗಿ ಅಂತ ಮುಚ್ಚಿಡುವ ಸ್ವಭಾವ ಅವಳದು.” ಎಂದು ಬರೆದುಕೊಂಡಿದ್ದಾರೆ.
