ಲೋಕಸಭೆ ನೂತನ ಯುವಕ, ಯುವತಿಯರಿಂದ ಕಂಗೋಳಿಸಲಿದೆ. ಮೊದಲ ಬಾರಿಗೆ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ಬಂದಿದ್ದಾರೆ.
ಲೋಕಸಭೆಗೆ ಆಯ್ಕೆಯಾಗಿ ಬಂದ 30 ವರ್ಷದ ಒಳಗಿನ ಐವರು ಯುವತಿಯರ ವಿವರ ಇಲ್ಲಿದೆ.
ರಾಜಸ್ಥಾನದ ಭರತಪುರ ಕ್ಷೇತ್ರದಿಂದ ಆಯ್ಕೆಯಾದ 26 ವರ್ಷದ ಸಂಜನಾ ಜಾಟವ, ದಲಿತ ಸಮಾಜಕ್ಕೆ ಸೇರಿದ ಯುವತಿ. ಸಾಮಾನ್ಯ ಕುಟುಂಬದಿಂದ ಬಂದಿರುವ ಸಂಜನಾ ಪದವೀಧರೆ.
ಉತ್ತರ ಪ್ರದೇಶದ ಖೈರಾನಾ ಕ್ಷೇತ್ರದಿಂದ ಆಯ್ಕೆಯಾದ 29 ವರ್ಷದ ಇಕ್ರಾ ಹಸನ, ರಾಜಕೀಯ ಹಿನ್ನೆಲೆಯ ಮನೆತನದಿಂದ ಬಂದ ಯುವತಿ. ಈಕೆಯ ಅಜ್ಜ, ತಂದೆ, ತಾಯಿ, ಸಹೋದರ ಲೋಕಸಭಾ ಸದಸ್ಯರಾಗಿ, ವಿಧಾನಸಭಾ ಸದಸ್ಯರಾಗಿದ್ದವರು.
ಶಾಂಭವಿ ಚೌಧರಿ, ಬಿಹಾರದ ಸಮಷ್ಟಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾಳೆ. ಈಕೆಗೆ ಕೇವಲ 25 ವರ್ಷ ವಯಸ್ಸು. ಈಕೆಯು ಸಹ ರಾಜಕೀಯ ಹಿನ್ನೆಲೆಯ ಮನೆತನದಿಂದ ಬಂದವಳು.
25 ವರ್ಷದ ಪ್ರಿಯಾ ಸರೋಜ ಉತ್ತರ ಪ್ರದೇಶದ ಮಚಲಿ ಶಹರ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾದಿಸಿದ್ದಾಳೆ.
27 ವರ್ಷ ವಯಸ್ಸಿನ ಪ್ರಿಯಾಂಕಾ ಜಾರಕಿಹೊಳಿ ಕರ್ನಾಟಕದ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಪ್ರಿಯಾಂಕಾ ಸಹ ರಾಜಕೀಯ ಮನೆತನದ ಕುಡಿ.
