ಧಾರವಾಡದ ಪಂಜುರ್ಲಿ ಹೋಟೆಲ್ ಗೆ ನುಗ್ಗಿದ ಕೋತಿಯೊಂದು ಅಲ್ಲಿನ ಗಾಜುಗಳನ್ನು ಪುಡಿ ಪುಡಿ ಮಾಡಿದೆ. ಧಾರವಾಡದ ಕೆ ಸಿ ಪಾರ್ಕ್ ಎದುರಿಗೆ ಇರುವ ಪಂಜುರ್ಲಿ ಹೋಟೆಲಿಗೆ ನುಗ್ಗಿದ ಕೋತಿ ಟೇಬಲ್ ಮೇಲೆ ಓಡಾಡಿದೆ. ಅಷ್ಟೇ ಅಲ್ಲದೆ ಗಾಜಿನಲ್ಲಿ ತನ್ನ ಮುಖ ತಾನೇ ನೋಡಿಕೊಂಡು ಆ ಗಾಜುಗಳನ್ನು ಕಿತ್ತು ಬಿಸಾಕಿದೆ.
ಹೋಟೆಲ್ ಮಾಲೀಕರು ಮತ್ತು ಗ್ರಾಹಕರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿದ ಈ ಕೋತಿ, ಕಡೆಗೆ ತನ್ನಷ್ಟಕ್ಕೆ ತಾನೇ ಜಾಗ ಖಾಲಿ ಮಾಡಿದೆ.
ಟೇಬಲ್ ನಿಂದ ಟೇಬಲ್ ಗೆ ಕೋತಿ ಜಿಗಿದಾಡುತ್ತ ಸ್ವಲ್ಪ ಹೊತ್ತು ಚೆಸ್ಟೆಯಾಡಿದೆ. ನಂತರ ಗ್ಲಾಸ್ ಗಳನ್ನು ಪುಡಿ ಪುಡಿ ಮಾಡಿ ಅಲ್ಲಿಂದ ಕೋತಿ, ಕಾಲ್ಕಿತ್ತಿದೆ
