ನರೇಂದ್ರ ಮೋದಿ ನೇತ್ರತ್ವದ ಸರ್ಕಾರದಲ್ಲಿ ಎರಡನೇ ಬಾರಿ ಕೇಂದ್ರ ಸಚಿವರಾಗಿರುವ ಪ್ರಲ್ಲಾದ ಜೋಶಿ ನಾಳೆ ತವರು ಕ್ಷೇತ್ರ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ.
ಜೋಶಿಯವರು ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಗ್ರಾಹಕ ವ್ಯವಹಾರಗಳು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ನವಿಕರಿಸಬಹುದಾದ ಇಂಧನ ಸಚಿವರಾಗಿ ಪದ ಗ್ರಹಣ ಮಾಡಿದ್ದಾರೆ.
ನೆಚ್ಚಿನ ನಾಯಕ ಪ್ರಲ್ಲಾದ ಜೋಶಿಯವರನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ಕೋರಲು ಭಾಜಪ ಕಾರ್ಯಕರ್ತರು ಸಜ್ಜಾಗಿದ್ದಾರೆ. ಮಧ್ಯಾಹ್ನ 3 ಘಂಟೆಗೆ ಆಗಮಿಸಲಿರುವ ಜೋಶಿಯವರನ್ನು ಮೆರವಣಿಗೆ ಮೂಲಕ ಪಕ್ಷದ ಕಚೇರಿಗೆ ಬರಮಾಡಿಕೊಳ್ಳಲು ಭರದ ಸಿದ್ಧತೆ ನಡೆದಿದೆ.
