ಹಾಸನದ ಅಶ್ಲೀಲ ವಿಡಿಯೋ ಪ್ರಕರಣದ ಬಳಿಕ ಸಂತ್ರಸ್ಥೆಗೆ ಬೆದರಿಕೆ ಆರೋಪ ಹೊತ್ತಿರುವ ಭವಾನಿ ರೇವಣ್ಣ ಬಂಧನಕ್ಕೆ SIT ಮತ್ತೆ ಕೋರ್ಟ ಮೆಟ್ಟಲೇರಿದೆ.
ನ್ಯಾಯಾಲಯದಿಂದ ಮಧ್ಯಂತರ ಜಾಮೀನು ಪಡೆದಿರುವ ಭವಾನಿ, SIT ಎದುರು ವಿಚಾರಣೆಗೆ ಹಾಜರಾಗಿದ್ದರು ಸಹ, ಸರಿಯಾಗಿ ವಿವರ ಕೊಡುತ್ತಿಲ್ಲವಂತೆ. ಹೀಗಾಗಿ ಜಾಮೀನು ಮುಂದುವರೆಸದೆ, ನಮ್ಮ ಕಸ್ಟಡಿಗೆ ಕೊಡಬೇಕೆಂದು SIT ನ್ಯಾಯಾಲಯಕ್ಕೆ ಮನವಿ ಮಾಡಿದೆ.
