ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಏರಿಕೆಯಾದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಅಗತ್ಯ ದಿನಸಿ ವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ.
ಧಾರವಾಡದ ಹೊಸ ಎ ಪಿ ಎಮ್ ಸಿ ಮಾರುಕಟ್ಟೆಯಲ್ಲಿ ತರಕಾರಿ ಕೊಳ್ಳಲು ಬಂದವರು ಬೆಲೆ ಏರಿಕೆ ಬಗ್ಗೆ ಮಾತಾಡುತ್ತಾ ಖರೀದಿಯಲ್ಲಿ ತೊಡಗಿದ್ದರು.
ಉಳ್ಳಾಗಡ್ಡಿ 50 ರೂಪಾಯಿ, ಟಮೆಟೋ 100 ರೂಪಾಯಿ, ಹಸಿಮೆಣಸಿನಕಾಯಿ 150 ರೂಪಾಯಿ, ಬದನೆಕಾಯಿ 60 ರೂಪಾಯಿ, ಆಲೂಗಡ್ಡೆ 45 ರೂಪಾಯಿಗೆ ಒಂದು ಕೆಜಿಗೆ ಮಾರಾಟವಾಗಿದೆ.
ಇನ್ನು ಕೋತಂಬ್ರಿ ಒಂದಕ್ಕೆ 30 ರೂಪಾಯಿಗೆ ಮಾರಾಟವಾಗಿದ್ದು, ಪುದಿನಾ 20 ರೂಪಾಯಿಗೆ ಒಂದು ಸಿವುಡು ಮಾರಾಟವಾಗಿದೆ. ಮೆಂತೆ ಪಲ್ಲೆ 40 ರೂಪಾಯಿಗೆ ಒಂದರಂತೆ ಮಾರಾಟವಾಗಿದ್ದು, ಚವಳಿಕಾಯಿ 110 ರೂಪಾಯಿಗೆ ಒಂದು ಕೆಜಿ ಮಾರಾಟವಾಗಿದೆ.
ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದಂತೆ ಗ್ರಾಹಕರಿಗೆ ಬರೆ ಬಿದ್ದಿದೆ. ಗ್ಯಾರೆಂಟಿ ಯೋಜನೆಗೆ ಹಣ ಕ್ರೋಡಿಕರಿಸಲು ಸರ್ಕಾರ ಮಾರಾಟ ತೆರಿಗೆ ಹೆಚ್ಚಿಸಲು ಕಾರಣ ಎನ್ನಲಾಗಿದೆ.
