ನವಲಗುಂದದ ಹಿರಿಯರು, ರಾಮಲಿಂಗ ಓಣಿಯ ನಿವಾಸಿಯಾದ ನಿವೃತ್ತ ಯೋಧ, ಹನುಮಂತಪ್ಪ ಹುಚ್ಚಪ್ಪ ಭೋವಿ( 82) ಭಾನುವಾರ ನಿಧನರಾದರು. ಮೃತರಿಗೆ ಪತ್ನಿ, 4 ಜನ ಪುತ್ರರು, ಓರ್ವ ಪುತ್ರಿ ಇದ್ದಾರೆ.
ಹಿರಿಯ ಪತ್ರಕರ್ತ ಹುಚ್ಚಪ್ಪ ಭೋವಿ ಮೃತರ ಪುತ್ರರಲ್ಲಿ ಒಬ್ಬರಾಗಿದ್ದಾರೆ. ಮೃತರ ನಿಧನಕ್ಕೆ ಪಂಚಗ್ರಹ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು, ಗವಿಮಠದ ಬಸವಲಿಂಗ ಸ್ವಾಮೀಜಿ, ಅಜಾತ ನಾಗಲಿಂಗ ಮಠದ ವೀರಯ್ಯ ಸ್ವಾಮೀಜಿ, ಶಾಸಕ ಎನ್. ಎಚ್. ಕೋನರಡ್ಡಿ, ಮಾಜಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಕೆ. ಎನ್. ಗಡ್ಡಿ, ಕ್ರೀಡಾಪ್ರಾಧಿಕಾರದ ಉಪಾಧ್ಯಕ್ಷರಾದ ವಿನೋದ ಅಸೂಟಿ, ಕೆಪಿಸಿಸಿ ಸದ್ಯಸರಾದ ವಿಜಯ ಕುಲಕರ್ಣಿ ಹಾಗೂ ಮಾಜಿ ಸೈನಿಕರು, ಪತ್ರಕರ್ತರು ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.
