ಪ್ರಿಯಾಂಕಾ ಗಾಂಧಿ, ಭಾರತದ ರಾಜಕಾರಣದಲ್ಲಿ ಹೆಚ್ಚು ಸುದ್ದಿಯಲ್ಲಿದೆ. ಆಕರ್ಷಕ ವ್ಯಕ್ತಿತ್ವ, ಸರಳತೆ, ಅಪ್ತತೆ ಎಲ್ಲವನ್ನು ಮೈಗೂಡಿಸಿಕೊಂಡಾಕೆಯ ಹೆಸರು ಪ್ರಿಯಾಂಕಾ ಗಾಂಧಿ.
ಈ ಸಲದ ಲೋಕಸಭಾ ಚುನಾವಣೆಯಲ್ಲಂತು ಅಣ್ಣ ರಾಹುಲ್ ಜೊತೆ ಪ್ರಿಯಾಂಕಾ ಗಾಂಧಿಯವರ ಪ್ರಚಾರ ಭಾಷಣಗಳು, ಹೆಚ್ಚು ಸುದ್ದಿ ಮಾಡಿದವು.
ಉತ್ತರ ಪ್ರದೇಶದ ರಾಯ ಬರೇಲಿ ಹಾಗೂ ಕೇರಳದ ವಾಯನಾಡನಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ, ರಾಯಬರೇಲಿ ಕ್ಷೇತ್ರವನ್ನು ಇಟ್ಟುಕೊಂಡು ವಾಯನಾಡ ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದಾರೆ. ಇದೀಗ ವಾಯನಾಡ ಕ್ಷೇತ್ರಕ್ಕೆ ಮತ್ತೊಮ್ಮೆ ಚುನಾವಣೆ ನಡೆಯಬೇಕಿದ್ದು, ಪ್ರಿಯಾಂಕಾ ಗಾಂಧಿ ವಾಯನಾಡನಿಂದ ಸ್ಪರ್ಧೆ ಮಾಡಲಿದ್ದಾರೆ.
ಪ್ರಿಯಾಂಕಾ ಗಾಂಧಿಯವರ ಮಗ ರೈಹಾನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ ಹಾಕಿ, ಪ್ರಿಯಾಂಕಾ ಗಾಂಧಿಯವರಿಗೆ ವಾಯನಾಡು ನಿಮಗಾಗಿ ಕಾಯುತ್ತಿದೆ. ಅಭಿನಂದನೆಗಳು ವಾಯನಾಡ ಎಂದು ತಾಯಿಗೆ ಶುಭ ಕೊರಿದ್ದಾನೆ. ಪ್ರಿಯಾಂಕಾ ಗಾಂಧಿಯವರಿಗೆ ಒಬ್ಬ ಮಗಳು ಹಾಗೂ ಒಬ್ಬ ಮಗ ಇದ್ದು, ಮಗಳು ಮೀರಾಯಾ ಹಾಗೂ ಮಗ ರೈಹಾನ್ ವಾದ್ರಾ, ತಾಯಿ ಸ್ಪರ್ಧೆ ಮಾಡೋದಕ್ಕೆ ಶುಭ ಕೋರಿದ್ದಾರೆ.
