ಸಾಂಸ್ಕೃತಿಕ ರಾಜಧಾನಿ ಧಾರವಾಡದಲ್ಲಿ ಅನಾಗರಿಕ ವರ್ತನೆ ನಡೆದಿದೆ. ಇವರೆಲ್ಲ ಮನುಷ್ಯರೋ ಅಥವಾ ರಾಕ್ಷಸರೋ ಅನ್ನೋದು ಗೊತ್ತಾಗಬೇಕಿದೆ.
ಧಾರವಾಡದ ರೈಲ್ವೇ ನಿಲ್ದಾಣದ ರಸ್ತೆಯಲ್ಲಿರುವ ಸರ್ಕಾರಿ ಶಾಲೆಯ ಪಕ್ಕ ಇರುವ ಗಟಾರಿನಲ್ಲಿ ಮಹಾತ್ಮರ ಪೋಟೋಗಳನ್ನು ಬಿಸಾಡಲಾಗಿದೆ.
ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ ಮಹಾತ್ಮಾ ಗಾಂಧಿ, ಭಗತ ಸಿಂಗ, ರಾಜೇಂದ್ರ ಪ್ರಸಾದ, ದೇಶಕ್ಕೆ ಸುಭದ್ರ ಸಂವಿಧಾನ ನೀಡಿದ ಡಾ. ಬಿ ಆರ್ ಅಂಬೇಡ್ಕರ, ಜಗತ್ತಿಗೆ ಶಾಂತಿ ಕರುಣೆ ತೋರಿದ ಮದರ ತೆರೇಸಾ, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು, ಜ್ಞಾನಪೀಠ ಡಾ. ಚಂದ್ರಶೇಖರ ಕಂಬಾರರ ಫೋಟೋಗಳನ್ನು ಗಟಾರಿನಲ್ಲಿ ಬಿಸಾಡಲಾಗಿದೆ.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡದ ಕಚೇರಿಯಲ್ಲಿದ್ದ ಈ ಫೋಟೋಗಳನ್ನು ಚರಂಡಿಯಲ್ಲಿ ಒಗೆಯಲಾಗಿದೆಯಂತೆ.
ಧಾರವಾಡದಲ್ಲಿ ಪ್ರಜ್ಞಾವಂತರು ಅನಾಗರಿಕ ವರ್ತನೆ ತೋರಿರುವದು ನಿಜಕ್ಕೂ ಆಘಾತ ತಂದಿದೆ.
