ಭಾರತ ಕ್ರಿಕೇಟ ತಂಡದ ಮಾಜಿ ವೇಗಿ ಡೇವಿಡ್ ಜಾನ್ಸನ್ ಅವರು ನಾಲ್ಕನೇ ಮಹಡಿಯ ಅಪಾರ್ಟ್ಮೆಂಟ್ನ ಬಾಲ್ಕನಿಯಿಂದ ಬಿದ್ದು ಗುರುವಾರ ಸಾವನ್ನಪ್ಪಿದ್ದಾರೆ.
ಭಾರತಕ್ಕಾಗಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಿರುವ ಜಾನ್ಸನ್ 52 ವರ್ಷ ವಯಸ್ಸಿನವರಾಗಿದ್ದರು. ಜಾನ್ಸನ ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳು ಇದ್ದಾರೆ.
52 ವರ್ಷದ ಡೇವಿಡ್ ಜೂಡ್ ಜಾನ್ಸನ್ ಬೆಂಗಳೂರಿನಲ್ಲಿರುವ ಕೊತ್ತನೂರಿನ ಕನಕ ಶ್ರೀ ಲೇಔಟ್ನಲ್ಲಿರುವ ತಮ್ಮ ಅಪಾರ್ಟ್ಮೆಂಟ್ನಿಂದ ಬಿದ್ದಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.