ಬಸವರಾಜ ಬೊಮ್ಮಾಯಿ ಲೋಕಸಭಾ ಸದಸ್ಯರಾದ ಬಳಿಕ ತೆರುವಾದ ಶಿಗ್ಗಾವ ಕ್ಷೇತ್ರಕ್ಕೆ 6 ತಿಂಗಳ ಒಳಗೆ ಉಪ ಚುನಾವಣೆ ನಡೆಯಲಿದೆ.
ಶಿಗ್ಗಾವ ಕ್ಷೇತ್ರದ ಕಾಂಗ್ರೇಸ್ ಟಿಕೇಟಗಾಗಿ ಭಾರಿ ಪೈಪೋಟಿ ಕಾಣಿಸಿಕೊಂಡಿದೆ. 2023 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೇಸ್ಸಿನಿಂದ ಸ್ಪರ್ಧಿಸಿ ಪರಾಭವಗೊಂಡ ಯಾಸಿರಖಾನ ಪಠಾಣ ಮತ್ತೆ ಕಾಂಗ್ರೇಸ್ ಟಿಕೇಟಗಾಗಿ ಪ್ರಯತ್ನ ನಡೆಸಿದ್ದಾರೆ.
ಮತ್ತೊಂದೆಡೆ ಮಾಜಿ ಶಾಸಕ ಅಜಂಪೀರ ಖಾದ್ರಿ, ಕಾಂಗ್ರೇಸ್ ಟಿಕೇಟ ಪಡೆಯಲು ಯತ್ನಿಸುತ್ತಿದ್ದಾರೆ. ಇಬ್ಬರು ಅಲ್ಪಸಂಖ್ಯಾತ ನಾಯಕರು ಎರಡು ಬಣಗಳಲ್ಲಿ ಗುರುತಿಸಿಕೊಂಡು ಟಿಕೇಟಗಾಗಿ ಪೈಪೋಟಿ ನಡೆಸಿದ್ದಾರೆ.
ಈ ಇಬ್ಬರ ಮಧ್ಯೆ ಕುಂದಗೋಳದ ಮಾಜಿ ಶಾಸಕ ದಿವಂಗತ ಸಿ ಎಸ್ ಶಿವಳ್ಳಿಯವರ ಸಹೋದರ ಷಣ್ಮುಖ ಶಿವಳ್ಳಿ ಶಿಗ್ಗಾವ ಕ್ಷೇತ್ರದಲ್ಲಿಯೇ ಬೀಡು ಬಿಟ್ಟು, ಈ ಸಾರಿ ಕಾಂಗ್ರೇಸ್ ಟಿಕೇಟ ಪಡೆಯಬೇಕು ಎಂದು ಹಠ ತೊಟ್ಟಿದ್ದಾರೆ. ಅಲ್ಲದೆ ಮತ್ತೊರ್ವ ಕಾಂಗ್ರೇಸ್ ನಾಯಕ ಸೋಮಣ್ಣ ಬೇವಿನಮರದ, ಹುಬ್ಬಳ್ಳಿಯ ರಜತ್ ಉಳ್ಳಾಗಡ್ಡಿಮಠ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ ಸಹ ಶಿಗ್ಗಾವ ಕ್ಷೇತ್ರದ ಕಾಂಗ್ರೇಸ್ ಟಿಕೇಟ ಪಡೆಯಲು ಪ್ರಭಾವ ಬಳಸುತ್ತಿದ್ದಾರೆ.
ಶಿಗ್ಗಾವ ಕಾಂಗ್ರೇಸ್ಸಿನಲ್ಲಿ ಟಿಕೇಟ ಪಡೆಯಲು ತೀವ್ರ ಪೈಪೋಟಿ ನಡೆದಿದ್ದು, ಬಣ ರಾಜಕೀಯ ಹೀಗೆ ಮುಂದುವರೆದರೆ, ಶಿಗ್ಗಾವ ಕ್ಷೇತ್ರದಲ್ಲಿ ಕಾಂಗ್ರೇಸ್ ಗೆಲ್ಲೋದು ಕಷ್ಟವಾಗಲಿದೆ.
