Download Our App

Follow us

Home » ಜೀವನಶೈಲಿ » ಯಾವ ದಿಕ್ಕಿಗೆ ತಲೆ ಹಾಕಿ ನಿದ್ರಿಸಿದರೆ ಉತ್ತಮ, ಇಲ್ಲಿದೆ ವಾಸ್ತು ಟಿಪ್ಸ್ !

ಯಾವ ದಿಕ್ಕಿಗೆ ತಲೆ ಹಾಕಿ ನಿದ್ರಿಸಿದರೆ ಉತ್ತಮ, ಇಲ್ಲಿದೆ ವಾಸ್ತು ಟಿಪ್ಸ್ !

ವಾಸ್ತು ಕೇವಲ ಮನೆ, ಕೋಣೆ ಕಟ್ಟೋಕೆ ಅಷ್ಟೇ ಅಲ್ಲ. ಯಾವ ರೀತಿ, ಯಾವ ದಿಕ್ಕಿಗೆ ಹೇಗೆ ಮಲಗಬೇಕು ಅನ್ನೋದಕ್ಕೂ ಇದೀಗ ಟಿಪ್ಸ್ ಕೊಡುತ್ತಿದ್ದಾರೆ. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕಿನ ಕಡೆ ಮುಖ ಮಾಡಿ ಮಲಗೋದರಿಂದ ಏನೆಲ್ಲಾ ಆಗತ್ತೆ ಅನ್ನೋದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

 

ಪೂರ್ವಕ್ಕೆ ಮಲಗಿ ಹೊಸ ಚೈತನ್ಯ ಪಡೆಯಿರಿ

ಪೂರ್ವಕ್ಕೆ ತಲೆ ಹಾಕಿ ಮಲಗುವುದರಿಂದ ಹಲವು ಅನುಕೂಲಗಳಿವೆ. ಒಳ್ಳೆ ನಿದ್ದೆ ಆಗುತ್ತದೆ. ಹೊಸ ಚೈತನ್ಯ, ಸಾಮರ್ಥ್ಯ ಬಂದಂತೆ ಭಾವನೆ ಮೂಡುತ್ತದೆ. ಆರೋಗ್ಯ ಸಮಸ್ಯೆಗಳಿಂದ ಹೊರಬರುವುದಕ್ಕೆ ಈ ದಿಕ್ಕು ಒಳ್ಳೆಯದು. ಅನಾರೋಗ್ಯದಿಂದ ಬಳಲಿ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದೀನಿ ಅನ್ನೋರಿಗೆ ಪೂರ್ವ ದಿಕ್ಕು ಒಳ್ಳೆಯದು. ಇನ್ನು ವಿದ್ಯಾರ್ಥಿಗಳಿಗೆ ಏಕಾಗ್ರತೆ ಹೆಚ್ಚಾಗುತ್ತದೆ ಮತ್ತು ಕಲಿತ ವಿಷಯಗಳು ನೆನಪಿನಲ್ಲಿ ಉಳಿಯುತ್ತವೆ. ಸ್ಮರಣ ಶಕ್ತಿ ಹೆಚ್ಚಾಗುತ್ತದೆ.

ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗಿದರೆ

ಪಶ್ಚಿಮಕ್ಕೆ ತಲೆ ಹಾಕಿ ಮಲಗುವುದು ತುಂಬ ಒಳ್ಳೆಯದೇನಲ್ಲ. ಆದರೂ ಯಶಸ್ಸು ಬೇಕು ಎಂದು ಬಯಸುವವರಿಗೆ ಇದು ಸರಿಯಾದ ದಿಕ್ಕು. ಈ ದಿಕ್ಕಿಗೆ ತಲೆ ಹಾಕಿ ಮಲಗಲು ಆರಂಭಿಸಿದ ಮೇಲೆ ಜೀವನದಲ್ಲಿ ಬದಲಾವಣೆ ಆಗುತ್ತಿದೆ ಎಂಬ ಭಾವನೆ ನಿಮ್ಮಲ್ಲಿ ಮೂಡಲು ಆರಂಭವಾಗುತ್ತದೆ. ಉಪಯುಕ್ತ ಕೆಲಸ ಮಾಡುತ್ತಿರುವ ನಂಬಿಕೆ ಬರುತ್ತದೆ. ಯಾವುದೇ ನಕಾರಾತ್ಮಕ ಶಕ್ತಿಯ ಪರಿಣಾಮ ನಿಮ್ಮ ಮೇಲೆ ಆಗುತ್ತಿದ್ದರೆ ಅದರಿಂದ ಆಚೆ ಬರಬಹುದು. ಹೆಸರು, ಕೀರ್ತಿ, ಯಶಸ್ಸು ಪಡೆಯಲು ಸಹಕಾರಿಯಾಗುತ್ತದೆ.

ದಕ್ಷಿಣ ದಿಕ್ಕಿಗೆ ಮಲಗಿದರೆ ಹೀಗೆ

ಮನೆಯ ಹಿರಿಯರು, ಯಜಮಾನ- ಯಜಮಾನಿ ದಕ್ಷಿಣಕ್ಕೆ ತಲೆ ಹಾಕಿ ಮಲಗುವುದು ಅತ್ಯುತ್ತಮ. ಹಲವು ಪದ್ಧತಿ ಹಾಗೂ ಸಂಸ್ಕೃತಿ ಪ್ರಕಾರ ಈ ದಿಕ್ಕಿಗೆ ತಲೆ ಇರಿಸಿಕೊಳ್ಳುವುದು ಸರಿ. ವಾಸ್ತು ಪ್ರಕಾರ, ಈ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಶ್ರೀಮಂತಿಕೆ ಹಾಗೂ ಉತ್ತಮ ಆರೋಗ್ಯ ಲಭಿಸುತ್ತದೆ. ಜತೆಗೆ ಸಂತೋಷವೂ ಸಿಕ್ಕಿ, ಕನಸುಗಳು ಈಡೇರುತ್ತವೆ. ಒಂದು ವೇಳೆ ಅಂದುಕೊಂಡ ಕೆಲಸಗಳು ನಿಧಾನ ಆಗುತ್ತಿವೆ, ಪೂರ್ತಿ ಮಾಡಲು ಆಗುತ್ತಿಲ್ಲ ಅನಿಸಿದರೆ ಈ ದಿಕ್ಕಿನಲ್ಲಿ ತಲೆಯಿಟ್ಟು ಮಲಗಿ, ಪ್ರಯತ್ನಿಸಿ ನೋಡಿ. ದಕ್ಷಿಣ ದಿಕ್ಕಿಗೆ ಮಲಗುವುದರಿಂದ ಮನಶ್ಯಾಂತಿ ದೊರೆತು, ಆರೋಗ್ಯ ವೃದ್ಧಿ ಆಗುತ್ತದೆ

ಉತ್ತರ ದಿಕ್ಕಿಗೆ ಸುತರಾಂ ತಲೆ ಹಾಕಿ ಮಲಗಬೇಡಿ

ವಾಸ್ತು ಪ್ರಕಾರವಾಗಿ ಉತ್ತರಕ್ಕೆ ತಲೆ ಹಾಕಿ ಮಲಗುವುದು ಖಂಡಿತಾ ಉತ್ತಮ ಅಲ್ಲ. ಆ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಕೆಟ್ಟ ಕನಸುಗಳು ಬೀಳುತ್ತವೆ. ಅದರ ಜತೆಗೆ ಬಹಳ ತೊಂದರೆಗಳೂ ಆಗುತ್ತವೆ. ಆದ್ದರಿಂದ ನಿದ್ರಿಸುವುದಕ್ಕೆ ಈ ದಿಕ್ಕನ್ನು ಸಲಹೆಯಾಗಿ ಮಾಡುವುದಿಲ್ಲ. ಇನ್ನು ವೈಜ್ಞಾನಿಕವಾಗಿ ಹೇಳಬೇಕು ಅಂದರೆ, ಭೂಮಿಯ ಅಯಸ್ಕಾಂತೀಯ ರೇಖೆ ಉತ್ತರ- ದಕ್ಷಿಣಕ್ಕೆ ಚಲಿಸುತ್ತಿರುತ್ತದೆ. ತಲೆಯನ್ನು ಉತ್ತರಕ್ಕೆ ಇಟ್ಟಾಗ ಆ ಅಯಸ್ಕಾಂತೀಯ ರೇಖೆಗಳಿಂದ ಮೆದುಳಿಗೆ ಹೆಚ್ಚು ಆಯಾಸ ಆಗುತ್ತದೆ. 

.

Karnataka Files
Author: Karnataka Files

Leave a Comment

RELATED LATEST NEWS

error: Content is protected !!