ನನಗೆ ಮದುವೆ ಮಾಡಿಕೊಳ್ಳುವ ಆಸೆಯಾಗಿದೆ. ದಯವಿಟ್ಟು ನನಗೆ ಕನ್ನ್ಯೆ ಹುಡುಕಿಕೊಡಿ ಎಂದು ಯುವಕನೊಬ್ಬ ಜನಸ್ಪಂಧನಾ ಕಾರ್ಯಕ್ರಮದಲ್ಲಿ ಬೇಡಿಕೆ ಇಟ್ಟ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕನಕಗಿರಿಯ ಸಂಗಪ್ಪ ಎಂಬ ಯುವಕ ಇಂದು ಕೊಪ್ಪಳ ಜಿಲ್ಲಾಡಳಿತ ನಡೆಸಿದ್ದ ಜನಸ್ಪಂಧನಾ ಕಾರ್ಯಕ್ರಮಕ್ಕೆ ಬಂದಿದ್ದ. ಜಿಲ್ಲಾಧಿಕಾರಿ ಅತುಲ್, ಜನರ ಅಹವಾಲು ಆಲಿಸಿ, ಒಂದೊಂದಾಗಿ ಸಮಸ್ಯೆ ಪರಿಹರಿಸುತ್ತಿದ್ದರು. ಅಷ್ಟರಲ್ಲಿ ಜಿಲ್ಲಾಧಿಕಾರಿಗೆ ಮನವಿ ಪತ್ರ ನೀಡಿದ ಸಂಗಪ್ಪ, ಹೇಗಾದ್ರು ಮಾಡಿ ನನಗೆ ಕನ್ನ್ಯೆ ಹುಡುಕಿಕೊಡಿ ಅಂದಿದ್ದೆ ತಡ, ಸ್ವತಃ ಜಿಲ್ಲಾಧಿಕಾರಿಗಳಿಗೆ ಸಂಗಪ್ಪನ ಅಹವಾಲು ದಂಗು ಬಡಿಸಿತು.
