ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇರಾಣಿ ಗ್ಯಾಂಗ್ ನ ಅಮ್ಜದ್ ಎಂಬಾತನನ್ನು ಕರೆದೋಯ್ಯುತ್ತಿದ್ದ ಪೊಲೀಸರ ಮೇಲೆ ಸೀನಿಮಿಯ ಶೈಲಿಯಲ್ಲಿ ಹಲ್ಲೆ ನಡೆಸಲಾಗಿದೆ. ಈ ಘಟನೆ ಗದಗನಲ್ಲಿ ನಡೆದಿದೆ.
ಗದಗ ರೇಲ್ವೆ ಸೇತುವೆ ಬಳಿ ಇರಾಣಿ ಗ್ಯಾಂಗ್ ಅಟ್ಟಹಾಸ ಮೆರೆದಿದ್ದು, ಘಟನೆಯಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಗಂಗಾವತಿ ಪೊಲೀಸರು ಅಮ್ಜದ್ ಇರಾಣಿ ಎಂಬಾತನನ್ನು ಗಂಗಾವತಿಗೆ ಕರೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ.
ಪೊಲೀಸರು ಅಮ್ಜದ್ ನನ್ನು ಕರೆದುಕೊಂಡು ಹೋಗುತ್ತಿದ್ದಂತೆ, ದ್ವಿಚಕ್ರ ವಾಹನಗಳಲ್ಲಿ ಬೆನ್ನು ಹತ್ತಿದ ನಾಲ್ಕಾರು ಯುವಕರ ತಂಡ ಪೊಲೀಸ ಕಾರ್ ತಡೆದಿದ್ದಾರೆ. ನಂತರ ಪೊಲೀಸರ ಮೇಲೆ ಹಲ್ಲೆ ನಡೆಸಿ, ಕಾರಿನ ಗಾಜು ಒಡೆದು, ಆರೋಪಿ ಅಮ್ಜದ್ ನನ್ನು ಬಿಡಿಸಿಕೊಂಡು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಗದಗ ಜಿಲ್ಲಾ ಎಸ್ ಪಿ ನ್ಯಾಮಗೌಡ ಭೇಟಿ ನೀಡಿದ್ದು, ತನಿಖೆ ನಡೆಸಿದ್ದಾರೆ.