ಹೆಸರು ಪಿ ಮನಿವಣ್ಣನ, IAS ಅಧಿಕಾರಿಯಾಗಿದ್ದುಕೊಂಡು ಐಷಾರಾಮಿ ಸರ್ಕಾರಿ ಸೌಲಭ್ಯ ಪಡೆದುಕೊಂಡು ಇರಬೇಕಿತ್ತು. ಹೆಸರಿಗೆ ತಕ್ಕಂತೆ ಮನಿವಣ್ಣನ ಅವರು ಮಕ್ಕಳ ಪಾಲಿನ ಮಾಣಿಕ್ಯ.
ಜವಾಬ್ದಾರಿ ವಹಿಸಿದ ಇಲಾಖೆಗಳಲ್ಲಿ ಮಾದರಿ ಕೆಲಸ ಮಾಡುತ್ತಿರುವ ಅವರು ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಮೇಲೆ ಕ್ರಾಂತಿಕಾರಿ ಕೆಲಸಕ್ಕೆ ಧುಮುಕಿದ್ದಾರೆ.
ನಿನ್ನೇ ರಾತ್ರಿ ಬೆಳಗಾವಿಗೆ ಆಗಮಿಸಿದ ಅವರು ತಮಗಾಗಿ ಕಾಯ್ದಿರಿಸಿದ್ದ ಹೋಟೆಲಗೆ ಹೋಗದೆ, ಹಾಲಭಾವಿಯಲ್ಲಿರುವ ಮುರಾರ್ಜಿ ಶಾಲೆಗೆ ಹೋಗಿದ್ದಾರೆ. ಅಲ್ಲಿ ಮಕ್ಕಳೊಂದಿಗೆ ಊಟ ಮಾಡಿದ ಮನಿವಣ್ಣನ ಸಾಹೇಬ್ರು, ಅಲ್ಲಿಯೇ ಮಕ್ಕಳೊಂದಿಗೆ ಮಲಗಿ, ಶಾಲೆಯ ಆಡಳಿತಕ್ಕೆ ಚುರುಕು ಮುಟ್ಟಿಸಿದ್ದಾರೆ.
ಇಂದು ಬೆಳಿಗ್ಗೆ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಅವರು, ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ, ಮಕ್ಕಳಿಗೆ ಯಾವದೇ ತೊಂದರೆಯಾಗದಂತೆ ಅಧಿಕಾರಿಗಳು ನೋಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.