ಟಿ 20 ವಿಜೇತ ಭಾರತೀಯ ಕ್ರಿಕೇಟ ತಂಡದ ಆಟಗಾರರು ನಾಳೆ ಸಂಜೆ ದೆಹಲಿಗೆ ಆಗಮಿಸಲಿದ್ದಾರೆ.
ರೋಹಿತ ಶರ್ಮಾ ನೇತೃತ್ವದ ತಂಡ ಅಭೂತಪೂರ್ವ ಗೆಲವು ಸಾಧಿಸಿದ್ದು, ಭಾರತದ ಕ್ರಿಕೇಟ ರತ್ನಗಳನ್ನು ಸ್ವಾಗತಿಸಲು ಕ್ರಿಕೇಟ ಪ್ರೇಮಿಗಳು ಸಜ್ಜಾಗಿದ್ದಾರೆ.
ಬಾರ್ಬಡೋಸ್‌ನಲ್ಲಿ ಚಂಡಮಾರುತ ಬೀಸುತ್ತಿರುವ ಪರಿಣಾಮ ಎರಡು ದಿನಗಳಿಂದ ಅಲ್ಲಿಯೇ ಉಳಿದಿರುವ ತಂಡ, ಇಂದು ಸಂಜೆ ಭಾರತಕ್ಕೆ ಪ್ರಯಾಣ ಬೆಳೆಸಲಿದೆ. ನಾಳೆ ಸಂಜೆ ಹೊತ್ತಿಗೆ ಭಾರತೀಯ ಕ್ರಿಕೇಟ ತಂಡದ ಸದಸ್ಯರು ದೆಹಲಿ ತಲುಪಲಿದ್ದಾರೆ.
