ನಿನ್ನೆಯಿಂದ ದೇಶದಲ್ಲಿ ಹೊಸ ಕ್ರಿಮಿನಲ್ ಕಾನೂನು ಜಾರಿಗೆ ಬಂದಿದ್ದು, ನಿನ್ನೆ ರಾತ್ರಿ 10 ಘಂಟೆಯವರೆಗೆ ಕರ್ನಾಟಕದಲ್ಲಿ 3 ಹೊಸ ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ 80 ಎಫ್ ಐ ಆರ್ ದಾಖಲಾಗಿವೆ.
ಕರ್ನಾಟಕದ ಕಾನೂನು ಸಚಿವ ಹೆಚ್ ಕೆ ಪಾಟೀಲ್, ಹೊಸ ಕ್ರಿಮಿನಲ್ ಕಾನೂನಿಗೆ ರಾಜ್ಯ ಮಟ್ಟದಲ್ಲಿ ತಿದ್ದುಪಡಿಗಳನ್ನು ಮಾಡಲು ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು.
ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೋಮವಾರ (ಜುಲೈ 1) ಜಾರಿಗೆ ಬಂದಂತೆ, ಕರ್ನಾಟಕದಲ್ಲಿ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ರಾತ್ರಿ 10 ಗಂಟೆಗೆ ಸುಮಾರು 80 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, ಹಾಸನ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಪತ್ನಿಯನ್ನು ಕೊಂದ ಆರೋಪದ ಮೇಲೆ ಪೊಲೀಸ್ ಪೇದೆಯೊಬ್ಬರನ್ನು ಬಂಧಿಸಿರುವುದು ಮೊದಲ ಪ್ರಕರಣವಾಗಿದೆ.
