ರಾಜ್ಯದ ಹೆಸರಾಂತ ಪ್ರವಾಸಿ ತಾಣವಾಗಿರುವ ಉತ್ತರ ಕನ್ನಡದ ದಾಂಡೇಲಿಗೆ ಧಾರವಾಡದಿಂದ ರೈಲು ಸೇವೆ ಆರಂಭ ಮಾಡಿಸಲು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರ ಪ್ರಯತ್ನ ನಡೆಸಿದ್ದಾರೆ.
ದಾಂಡೇಲಿ ಪ್ರವಾಸಿ ತಾಣವಾಗಿದ್ದು, ಬ್ರಿಟಿಷ್ ಕಾಲದಿಂದಲೂ ಧಾರವಾಡದಿಂದ ದಾಂಡೇಲಿಗೆ ರೈಲು ಸೇವೆ ಇತ್ತು, ಈಗ ಅದನ್ನು ಪುನರಾರಂಭ ಮಾಡುವಂತೆ ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣನವರನ್ನು ಕಾಗೇರಿ ಆಗ್ರಹಿಸಿದ್ದಾರೆ.
