ಕಂಗನಾಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಅಮಾನತುಗೊಂಡಿದ್ದ ಸಿಐಎಸ್‌ಎಫ್ ಕಾನ್ಸ್‌ಟೇಬಲ್ ಕುಲ್ವಿಂದರ್ ಕೌರ್ ಮತ್ತೆ ಸೇವೆಗೆ ಮರಳಿದ್ದಾರೆ.
ಕುಲ್ವಿಂದರ ಕೌರ್ ಗೆ ಚಂದಿಗಡದಿಂದ ಬೆಂಗಳೂರಿಗೆ ವರ್ಗಾಯಿಸಲಾಗಿದೆ. ದೆಹಲಿ ಗಡಿಯಲ್ಲಿ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ನಡೆದ ರೈತರ ಪ್ರತಿಭಟನೆ ಬಗ್ಗೆ ಕಂಗನಾ ರಾಣಾ ವತ್ ನೀಡಿದ ಹೇಳಿಕೆ ಕೌರ್ ಳ ಆಕ್ರೋಶಕ್ಕೆ ಕಾರಣವಾಗಿತ್ತು.
ಚಂದಿಗಡ ವಿಮಾನ ನಿಲ್ದಾಣದಲ್ಲಿ ಕುಲ್ವಿಂದರ ಕೌರ್, ಕಂಗನಾಗೆ ಕಪಾಳ ಮೋಕ್ಷ ಮಾಡಿದ್ದರು. ಇದು ದೇಶದಲ್ಲಿ ಸಂಚಲನ ಮೂಡಿಸಿತ್ತು.
