ಪಂಚ ನದಿಗಳ ನಾಡು ವಿಜಯಪುರದಲ್ಲಿ ನಡೆದ ಘಟನೆಯೊಂದರಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.
ನಿನ್ನೆ ನದಿ ದಡದಲ್ಲಿ ಜೂಜು ಆಡುವ ವೇಳೆ ಪೋಲಿಸರು ದಾಳಿ ನಡೆಸಿದಾಗ, ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಪ್ರಾಣ ತೆತ್ತಿದ್ದಾರೆ. ತೆಪ್ಪದ ಮೂಲಕ ಪರಾರಿಯಾಗಬೇಕು ಅನ್ನುವಷ್ಟರಲ್ಲಿ ತೆಪ್ಪ ಮುಳುಗಿದೆ.
ಈ ಘಟನೆಯಲ್ಲಿ ಒಟ್ಟು ಮೂವರು ನೀರು ಪಾಲಾಗಿದ್ದು, ಮೂವರ ಶವ ಹೊರಕ್ಕೆ ತೆಗೆಯಲಾಗಿದೆ. 6 ಜನರ ಪೈಕಿ ಬಶೀರ ಹೊನವಾಡ ಎಂಬಾತ ಮಾತ್ರ ಪಾರಾಗಿ ಮನೆಗೆ ಬಂದಿದ್ದು, ಇನ್ನಿಬ್ಬರ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಜಿಲ್ಲೆಯ ರಕ್ಷಣಾ ತಂಡ ಒಟ್ಟು 6 ಬೋಟಗಳಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.
