ಮುದ್ದೇಬಿಹಾಳದ ತಾಳಿಕೋಟೆ ರಸ್ತೆಯಲ್ಲಿರುವ ಮುಸ್ಲಿಮ್ ಸಮಾಜದ ಖಬರಸ್ಥಾನದಲ್ಲಿದ್ದ ನೂರಕ್ಕೂ ಹೆಚ್ಚು ಗೋರಿಗಳನ್ನು ನೆಲಸಮ ಮಾಡಲಾಗಿದೆ.
ಗೋರಿ ನೆಲಸಮ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರ ಮೇಲೆ ದೂರು ಧಾಖಲಾಗಿದೆ. ಕಾಶಿನಾಥ, ಮಲ್ಲಿಕಾರ್ಜುನ್, ವಿಜಯ ಬಾರಿಕಾಯಿ, ನೀಲಮ್ಮ ಬಾರಿಕಾಯಿ, ಸಂಗಮೇಶ ಹಿರೇಕುರುಬರ ಎಂಬುವವರ ಮೇಲೆ ಪ್ರಕರಣ ಧಾಖಲು ಮಾಡಲಾಗಿದೆ.
ಖಬರಸ್ಥಾನ ಇರುವ ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ವ್ಯಾಜ್ಯ ಇತ್ತೆಂದು ಹೇಳಲಾಗಿದೆ. ಏಕಾಏಕಿ 6 ಜನ ಬಂದು ಗೋರಿಗಳನ್ನು ನಾಶ ಮಾಡಿದ್ದಾರೆ ಎಂದು ಮುದ್ದೇಬಿಹಾಳದ ಮುಸ್ಲಿಮ್ ಸಮಾಜದ ನಾಯಕ ಮೆಹಬೂಬ ಗೋಳಸಂಗಿ ದೂರು ನೀಡಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.