ಹೇಳಿ ಕೇಳಿ ಬಡತನ, ರಟ್ಟೆಯ ಮೇಲಿನ ಬದುಕು, ಅವತ್ತೆ ದುಡಿದು ಅವತ್ತೇ ತಿನ್ನುವ ಕಷ್ಟಕರ ಜೀವನ. ಇಂತದರಲ್ಲಿ ಮತ್ತೊಬ್ಬರಿಗಾಗಿ ಹೃದಯ ಮಿಡಿಯೋದಿದೆಯಲ್ಲಾ ಅದು ಎಲ್ಲರಿಗೂ ಸಾಧ್ಯವಾಗದ ಮಾತು.
ಆದ್ರೆ ರಾಯಚೂರಿನ ಕೂಲಿ ಕಾರ್ಮಿಕ ಇದನ್ನು ಸಾಧ್ಯವಾಗಿರಿಸಿ, ಮನಸ್ಸು ಗೆದ್ದಿದ್ದಾನೆ. ದುಡಿದ ದುಡ್ಡಲ್ಲಿ 40 ಸಾವಿರ ರೂಪಾಯಿ ಉಳಿಸಿದ್ದಾನೆ. ರಾಯಚೂರ ಜಿಲ್ಲೆಯ ಮಲ್ಕಂದಿನ್ನಿ ಗ್ರಾಮದ ಆಂಜನೇಯ ಯಾದವ ಎಂಬ ಕೂಲಿ ಕಾರ್ಮಿಕ ಬಡ ಮಕ್ಕಳಿಗೆ, ತಾನು ದುಡಿದು ಉಳಿದ ಹಣದಲ್ಲಿ, 11 ಸೈಕಲ್ ಖರೀದಿಸಿ ಕೊಟ್ಟಿದ್ದಾನೆ
ಹಳ್ಳಿಯ ವಿಧ್ಯಾರ್ಥಿಗಳು ಶಾಲೆಗೆ ನಡೆದುಕೊಂಡು ಹೋಗುತ್ತಿರುವದನ್ನು ಗಮನಿಸಿದ ಆಂಜನೇಯನ ಹೃದಯ ಮಿಡಿದಿದೆ. ಮಕ್ಕಳಿಗೆ ಸೈಕಲ್ ಕೊಡಿಸಬೇಕು ಎಂದು ನಿರ್ಧರಿಸಿ, ಆಂಜನೇಯ, ದುಡಿಮೆಯ ಹಣ ಉಳಿತಾಯ ಮಾಡಲು ಪ್ರಾರಂಭಿಸಿದ್ದಾನೆ. ಆಂಜನೇಯನ ಈ ಕಾರ್ಯವನ್ನು ಈಟಿವಿ ಭಾರತ ಪ್ರಕಟ ಮಾಡಿದೆ. ದಿ ಬೆಟರ್ ಇಂಡಿಯಾ, ಆಂಜನೇಯನ ಮಾನವೀಯ ಕಾರ್ಯದ ಮೇಲೆ ಬೆಳಕು ಚೆಲ್ಲಿದೆ.
ಹಾಗೆ ಉಳಿತಾಯ ಮಾಡಿದ 40 ಸಾವಿರ ರೂಪಾಯಿ ಹಣದಲ್ಲಿ, ಕೂಲಿ ಕಾರ್ಮಿಕ ಆಂಜನೇಯ, ಬಡ ಮಕ್ಕಳಿಗೆ 11 ಸೈಕಲ್ ಖರೀದಿಸಿ ಮಾನವೀಯತೆ ಮೆರೆದಿದ್ದಾನೆ.
