7 ರಾಜ್ಯಗಳಲ್ಲಿ ಬುಧವಾರ ನಡೆದ ಚುನಾವಣೆಯ 13 ವಿಧಾನಸಭಾ ಸ್ಥಾನಗಳ ಚುನಾವಣೆ ಫಲಿತಾಂಶ ಹೊರಬಿದ್ದಿದೆ. 13 ಸ್ಥಾನಗಳ ಪೈಕಿ ಕಾಂಗ್ರೆಸ್ ಮತ್ತು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ತಲಾ ನಾಲ್ಕು ಸ್ಥಾನಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.
ಬಿಜೆಪಿ ಅಭ್ಯರ್ಥಿಗಳು ಎರಡು ಸ್ಥಾನಗಳಲ್ಲಿ ಜಯಗಳಿಸಿದ್ದು, ಆಪ್ ಮತ್ತು ಡಿಎಂಕೆ ತಲಾ ಒಂದು ಸ್ಥಾನ ಗಳಿಸಿವೆ.
ಬಿಹಾರದ ರುಪೌಲಿ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಶಂಕರ್ ಸಿಂಗ್ ಗೆಲುವು ಸಾಧಿಸಿದ್ದಾರೆ
ಪಂಜಾಬನ ಜಲಂಧರ್ ಪಶ್ಚಿಮ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿದೆ.
ಹಿಮಾಚಲ ಪ್ರದೇಶ: ಆಡಳಿತಾರೂಢ ಕಾಂಗ್ರೆಸ್ ಡೆಹ್ರಾ ಮತ್ತು ನಲಗಢ ವಿಧಾನಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿದ್ದು, ಬಿಜೆಪಿ ಹಮೀರ್‌ಪುರ ವಿಧಾನಸಭಾ ಕ್ಷೇತ್ರವನ್ನು ತನ್ನದಾಗಿಸಿಕೊಂಡಿದೆ.
ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಅಖಿಲ ಭಾರತ ತೃಣಮೂಲ್ ಕಾಂಗ್ರೆಸ್ ರಾಯಗಂಜ್, ರಾಣಾಘಾಟ್ ದಕ್ಷಿಣ ಮಾಣಿಕ್ತಾಲಾ ಮತ್ತು ಬಾಗ್ಡಾ ಸ್ಥಾನಗಳನ್ನು ಗೆದ್ದಿದೆ.
ಉತ್ತರಾಖಂಡದ ಬದರಿನಾಥ್ ಮತ್ತು ಮಂಗಳೂರ್ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಮಧ್ಯಪ್ರದೇಶದ ಅಮರವಾರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಮಲೇಶ್ ಪ್ರತಾಪ್ ಶಾ ಗೆಲುವು ಸಾಧಿಸಿದ್ದಾರೆ.