ಮಾಜಿ ಮುಖ್ಯಮಂತ್ರಿ ಹಾಗೂ ಸದ್ಯ ಬೆಳಗಾವಿ ಸಂಸದರಾಗಿರುವ ಜಗದೀಶ ಶೆಟ್ಟರ, ಬೆಳಗಾವಿಗೆ ಭರ್ಜರಿ ಹಣ ತಂದಿದ್ದಾರೆ.
ಬಹುವರ್ಷಗಳ ಬೇಡಿಕೆಯಾಗಿದ್ದ ಬೆಳಗಾವಿ – ಪಣಜಿ NH 748, 52 ಕಿ.ಮೀ ಉದ್ದದ ಚತುಷ್ಪಥ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ 4,000 ಕೋಟಿ ರೂ. ಅನುಮೋದನೆ ದೊರಕಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿರುವ ಜಗದೀಶ ಶೆಟ್ಟರ ಅಭಿನಂದನೆ ಸಲ್ಲಿಸಿದ್ದಾರೆ.
