ಧಾರವಾಡ ದ್ವನಿ ಸಂಘಟನೆ ಆಶ್ರಯದಲ್ಲಿ HDBRTS ಅವ್ಯವಸ್ಧೆ ವಿರುದ್ಧ ನಾಳೆ ಪಕ್ಷಾತೀತ ಹೋರಾಟ ಹಮ್ಮಿಕೊಂಡಿದ್ದು, ಶಾಸಕ ಬೆಲ್ಲದ ಈ ಹೋರಾಟವನ್ನು ಬೆಂಬಲಿಸಿದ್ದಾರೆ.
ಮೊದಲಿನಿಂದಲೂ BRTS ಯೋಜನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ಬೆಲ್ಲದ ಸರ್ಕಾರದ ಗಮನ ಸೆಳೆದಿದ್ದರು. ನಾಳೆಯಿಂದ ಅಧಿವೇಶನ ಆರಂಭವಾಗುವ ಕಾರಣ ನನಗೆ ವೈಯುಕ್ತಿಕವಾಗಿ ಹೋರಾಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಕರ್ನಾಟಕ ಫೈಲ್ಸ್ ಜೊತೆ ಮಾತನಾಡಿದ ಅವರು ಸರ್ಕಾರ ಅನೇಕ ಹಗರಣಗಳನ್ನು ಮಾಡಿದೆ. ಮೂಡಾ ಹಗರಣ, ವಾಲ್ಮೀಕಿ ಹಗರಣದ ಬಗ್ಗೆ ಬಿಜೆಪಿ ಸದನದಲ್ಲಿ ಹೋರಾಟ ನಡೆಸಲಿದೆ ಎಂದರು.
ನಾಳೆ ಬೆಳಿಗ್ಗೆ ನವಲೂರನಿಂದ ಪಾದಯಾತ್ರೆ ಆರಂಭವಾಗಲಿದ್ದು, ಪಾದಯಾತ್ರೆ ಜಿಲ್ಲಾಧಿಕಾರಿ ಕಚೇರಿಗೆ ತಲುಪಲಿದೆ. ನಾಳೆ ನಡೆಯಲಿರುವ ಹೋರಾಟಕ್ಕೆ 14 ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ನಾಳೆ ನಡೆಯಲಿರುವ ಪಾದಯಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಜನ ಕೈ ಜೋಡಿಸಬೇಕೆಂದು ಸಂಘಟಕ ಈಶ್ವರ ಶಿವಳ್ಳಿ ಮನವಿ ಮಾಡಿದ್ದಾರೆ.