ದೇಶದ ನಂಬರ ಒನ್ ಉದ್ಯಮಿ ಮುಖೇಶ ಅಂಬಾನಿ ಪುತ್ರ ಅನಂತ ಅಂಬಾನಿ ಮದುವೆ ಜಗತ್ತಿನ ಅತ್ಯಂತ ತುಟ್ಟಿ ಮದುವೆ ಎಂದು ಹೇಳಲಾಗಿದೆ.
ಟೈಮ್ಸ್ ಅಲಜಿಬ್ರಾ ಅನಂತ ಅಂಬಾನಿ ಮದುವೆಯ ಖರ್ಚಿನ ಬಗ್ಗೆ ಸುದ್ದಿ ಪ್ರಕಟ ಮಾಡಿದ್ದು, ಈ ವಿವಾಹಕ್ಕೆ 5 ಸಾವಿರ ಕೋಟಿ ವೆಚ್ಚವಾಗಿದೆ ಎಂದು ಅಂದಾಜಿಸಿದೆ.
ಅನಂತ್ ಅಂಬಾನಿಯ ವಿವಾಹ ಆಮಂತ್ರಣ ಪತ್ರಿಕೆಯ ವೆಚ್ಚವು ಭಾರತದಲ್ಲಿನ ಸರಾಸರಿ ವಾರ್ಷಿಕ ವೇತನಕ್ಕೆ ಬಹುತೇಕ ಹೊಂದಿಕೆಯಾಗುತ್ತದೆ ಎಂದು ಹೇಳಲಾಗಿದೆ.
ಈ ಅಂಕಿ ಅಂಶವು ಪ್ರಿನ್ಸೆಸ್ ಡಯಾನಾ ಮತ್ತು ಪ್ರಿನ್ಸ್ ಚಾರ್ಲ್ಸ್ ಅವರಂತಹ ಸಾಂಪ್ರದಾಯಿಕ ವಿವಾಹಗಳ ವೆಚ್ಚ 1,361 ಕೋಟಿ ರೂಪಾಯಿಯನ್ನು ಮೀರಿಸಿದೆ ಎನ್ನಲಾಗಿದೆ.
KoiMoi .com ನಲ್ಲಿನ ವರದಿಯ ಪ್ರಕಾರ, ಮದುವೆಯ ಆಮಂತ್ರಣದ ವೆಚ್ಚವು 6 ರಿಂದ 7 ಲಕ್ಷ ರೂಪಾಯಿಗಳ ನಡುವೆ ಇತ್ತು ಎಂದು ಹೇಳಲಾಗಿದೆ.