ನಮ್ಮಲ್ಲಿ ಮಕ್ಕಳು ಜಾಸ್ತಿ ಹಠ ಮಾಡುತ್ತಿದ್ದರೆ, ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೆ ದೃಷ್ಟಿ ತೆಗೆಯುವ ಸಂಪ್ರದಾಯ ಇನ್ನು ಚಾಲ್ತಿಯಲ್ಲಿದೆ.
ಆದರೆ ಇಲ್ಲೊಬ್ಬ ರೈತ ತಾನು ಬೆಳೆದ ಟಮೆಟೋ ಬೆಳೆಗೆ ದೃಷ್ಟಿಯಾಗಬಾರದು ಎಂದು ತನ್ನ ತೋಟಕ್ಕೆ ದೃಷ್ಟಿ ಬೋಂಬೆ ಕಟ್ಟುವ ಬದಲು ರಚಿತಾ ರಾಮ್ ಹಾಗೂ ಸನ್ನಿ ಲಿಯೋನ್ ಫೋಟೋ ತೂಗು ಹಾಕಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳದ ದೀಪಕ ಎಂಬ ರೈತರ ಈ ರೀತಿಯಾಗಿ ಮಾದಕ ನಟಿ ಸನ್ನಿ ಲಿಯೋನ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಫೋಟೋ ಹಾಕಿ ಗಮನ ಸೆಳೆದಿದ್ದಾನೆ.
