ಮಹಾರಾಷ್ಟ್ರದಲ್ಲಿ ಸದ್ಯದಲ್ಲಿಯೇ ವಿಧಾನಸಭಾ ಚುನಾವಣೆ ನಡೆಯಲಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ NDA ಸರ್ಕಾರ, ಕರ್ನಾಟಕ ಕಾಂಗ್ರೇಸ್ ಸರ್ಕಾರದಂತೆ, ಬಿಟ್ಟಿ ಭಾಗ್ಯಕ್ಕೆ ಮುಂದಾಗಿದೆ.
ಮಹಾರಾಷ್ಟ್ರ NDA ಸರ್ಕಾರವು ಲಾಡ್ಲಾ ಭಾಯಿ ಯೋಜನೆಯನ್ನು ಜಾರಿಗೆ ತಂದಿದೆ. ಸಧ್ಯ ಮಹಾರಾಷ್ಟ್ರ ಸರ್ಕಾರ ಲಾಡ್ಲಿ ಬಹೆನ್ ಯೋಜನೆ ಕಾರ್ಯಗತಗೊಳಿಸಿದ ಬಳಿಕ ಈ ಯೋಜನೆ ಜಾರಿಗೆ ತಂದಿದೆ.
ಚುನಾವಣೆಗೂ ಮುನ್ನ ಮತ್ತೊಂದು ಮಾಸ್ಟರ್ ಸ್ಟ್ರೋಕ ನೀಡಿರುವ ಬಿಜೆಪಿ ನೇತ್ರತ್ವದ ಸರ್ಕಾರ, 12 ನೇ ತರಗತಿ ಉತ್ತೀರ್ಣರಾದ ಯುವಕರಿಗೆ ತಿಂಗಳಿಗೆ 6,000 ರೂಪಾಯಿ ನೀಡುವದಾಗಿ ಘೋಷಿಸಿದೆ.
ಡಿಪ್ಲೊಮಾ ವ್ಯಾಸಂಗ ಮಾಡುವವರಿಗೆ ತಿಂಗಳಿಗೆ 8,000 ರೂಪಾಯಿ ಹಾಗೂ ಪದವೀಧರ ಯುವಕರು ಸರ್ಕಾರದಿಂದ ತಿಂಗಳಿಗೆ 10,000 ರೂಪಾಯಿ ಪಡೆಯಲಿದ್ದಾರೆಂದು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೇಸ್ ಸರ್ಕಾರ ಉಚಿತ ಭಾಗ್ಯಗಳನ್ನು ನೀಡಿದ್ದಕ್ಕಾಗಿ ಆಕ್ರೋಶ ಹೊರಹಾಕಿದ್ದ ಬಿಜೆಪಿ ಇದೀಗ ಮಹಾರಾಷ್ಟ್ರದಲ್ಲಿ ಅಲ್ಲಿನ ಸರ್ಕಾರ ತೆಗೆದುಕೊಂಡ ನಿಲುವಿನ ಬಗ್ಗೆ ಸ್ಪಷ್ಟಪಡಿಸಬೇಕಿದೆ.
