KSRTC ಹೊಸ ಪ್ರಯೋಗಕ್ಕೆ ಮುಂದಾಗಿದೆ. 10 ಲಕ್ಷ ಕಿಲೋಮೀಟರ್ ಓಡಿರುವ ಬಸ್ಸುಗಳಿಗೆ ಮತ್ತಷ್ಟು ರಿಪೇರಿ ಮಾಡಿ ಹೊಸ ರೂಪ ಕೊಟ್ಟು ಮತ್ತೆ ರಸ್ತೆಗೆ ಇಳಿಸಿವೆ.
ಕೆಎಸ್‌ಆರ್‌ಟಿಸಿಯ ಹಳೇ ಸಾರಿಗೆ ಬಸ್‌ಗಳನ್ನು ನವೀಕರಿಸಿ ಮತ್ತೆ ಬಳಸುವ ಯೋಜನೆಯಡಿ ನವೀಕೃತ ಬಸ್‌ಗಳ ಸಂಖ್ಯೆ ಸಾವಿರ ಗಡಿ ದಾಟಿದೆ. ಇಲ್ಲಿಯವರೆಗೆ ಅಂತಹ 1,027 ಬಸ್‌ಗಳನ್ನು ನವೀಕರಿಸಲಾಗಿದೆ.
ಈ ಮೊದಲು 10 ಲಕ್ಷ ಕಿ.ಮೀ ಸಂಚಾರ ಮಾಡಿದ ಬಸ್‌ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತಿತ್ತು. ಇದೀಗ ಈ ಬಸ್‌ಗಳು ಹೊಸ ಯೋಜನೆಯಿಂದಾಗಿ ನವೀಕರಣಗೊಂಡು ಮತ್ತೆ 3 ಲಕ್ಷ ಕಿ.ಮೀ ಸಂಚರಿಸಲಿವೆ.
ಒಂದು ಸಾರಿಗೆ ಬಸ್ ಖರೀದಿಗೆ ಕನಿಷ್ಠ ರೂ. 40 ಲಕ್ಷ ಬೇಕಾಗುತ್ತದೆ. ಒಂದು ಬಸ್ ನವೀಕರಿಸಲು ರೂ. 3 ಲಕ್ಷದಿಂದ ರೂ. 4 ಲಕ್ಷ ಬೇಕಾಗುತ್ತದೆ. ಒಂದು ಹೊಸ ಬಸ್ ಖರೀದಿ ಮಾಡುವ ವೆಚ್ಚದಲ್ಲಿ 10 ಬಸ್‌ಗಳನ್ನು ನವೀಕರಿಸಲು ಸಾಧ್ಯವಾಗುತ್ತದೆ.ಇದರಿಂದಾಗಿ ಬಸ್‌ಗಳ ಬೇಡಿಕೆಯನ್ನು ಪೂರೈಸಲು ಸಹಾಯಕವಾಗುತ್ತದೆ.
