ಧಾರವಾಡದ ಹೆಸರಾಂತ ಶಿಕ್ಷಣ ಸಂಸ್ಥೆಯಲ್ಲಿ 8 ನೇ ತರಗತಿಯ ವಿಧ್ಯಾರ್ಥಿಯ ಬೆನ್ನಿಗೆ ಬಾಸುಂಡೆ ಬರುವಂತೆ ಥಳಿಸಿದ್ದ ಶಿಕ್ಷಕನನ್ನು ಶಾಲಾ ಆಡಳಿತ ಮಂಡಳಿ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದೆ.
ಶನಿವಾರದಂದು ಶಿಕ್ಷಕರೊಬ್ಬರು ವಿಧ್ಯಾರ್ಥಿಗೆ ಶಾಲೆಯಲ್ಲಿಯೇ ಮನಸೋ ಇಚ್ಛೆ ಥಳಿಸಿದ್ದರು. ಈ ಸುದ್ದಿ ಕರ್ನಾಟಕ ಫೈಲ್ಸ್ ನಲ್ಲಿ ಬಿತ್ತರಗೊಂಡಿತ್ತು. ಕರ್ನಾಟಕ ಫೈಲ್ಸ್ ನಲ್ಲಿ ಥಳಿತದ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ ಕರ್ನಾಟಕ ಫೈಲ್ಸ್ ಗೆ ಪ್ರತಿಕ್ರೀಯೆ ನೀಡಿರುವ ಚೇರಮನ್ ಸಂಜೀವ ಪಾಟೀಲ, ಆ ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿರುವದಾಗಿ ತಿಳಿಸಿದ್ದಾರೆ.
