ಜಾತಿ ವ್ಯವಸ್ಥೆ ನಿರ್ಮೂಲನೆಗೆ ಸರ್ಕಾರ ಅಂತರಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡುತ್ತಿದೆ. ಪರಿಶಿಷ್ಟ ಜಾತಿಗೆ ಸೇರಿದ ಯುವತಿ ಅನ್ಯ ಜಾತಿಯ ಹುಡುಗನಿಗೆ ಮದುವೆಯಾದರೆ ಇದ್ದರೆ ಮೂರು ಲಕ್ಷ, ಪರಿಶಿಷ್ಟ ಜಾತಿಯ ಹುಡುಗ ಅನ್ಯ ಜಾತಿಯ ಹುಡುಗಿಗೆ ಮದುವೆಯಾದರೆ ಎರಡೂವರೆ ಲಕ್ಷ ಪ್ರೋತ್ಸಾಹಧನ ನೀಡುತ್ತಿದೆ.
ಹಾಗೆ ಅಂತರಜಾತಿ ಮದುವೆಯಾಗುವ ಗಂಡ ಹೆಂಡತಿಯ ಜಂಟಿ ಖಾತೆ ತೆರೆದು ಮೂರು ವರ್ಷಗಳ ವರೆಗೆ ಪ್ರೋತ್ಸಾಹ ಧನದ ಅರ್ಧದಷ್ಟು ಹಣವನ್ನು ಠೇವಣಿ ಇಡಲಾಗುತ್ತದೆ.
ಧಾರವಾಡ ಜಿಲ್ಲೆಯಲ್ಲಿ 2024-25 ಸಾಲಿನಲ್ಲಿ ಅತೀ ಹೆಚ್ಚು ಅಂತರಜಾತಿಯ ವಿವಾಹಗಳಾಗಿವೆ. ಹುಬ್ಬಳ್ಳಿಯಲ್ಲಿ 34, ಧಾರವಾಡದಲ್ಲಿ 12, ಕಲಘಟಗಿಯಲ್ಲಿ 7. ಕುಂದಗೋಳದಲ್ಲಿ 4 ಮತ್ತು ನವಲಗುಂದ ತಾಲೂಕಿನಲ್ಲಿ 4 ಅಂತರಜಾತಿಯ ವಿವಾಹಗಳಾಗಿವೆ.
ಸಮಾಜ ಕಲ್ಯಾಣ ಇಲಾಖೆ ಅಂತರಜಾತಿ ವಿವಾಹವಾಗುವ ಯುವಕ ಯುವತಿಯರ ಜಾತಿ ಪ್ರಮಾಣ ಪತ್ರ ಪಡೆದು ಹಣ ಬಿಡುಗಡೆ ಮಾಡುತ್ತದೆ. ಸರ್ಕಾರ ಅಂತರಜಾತಿ ವಿವಾಹಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವದು, ಜಾತಿ ವ್ಯವಸ್ಥೆ ನಿರ್ಮೂಲನೆಗೆ ಸಹಕಾರಿಯಾಗಿದೆ.
