ನಾಡಿನ ಚಿರಪರಿಚಿತ ಸಾಹಿತಿ, ಕನ್ನಡ ಸಾಹಿತ್ಯದ ಹಿರಿಯ ಕೊಂಡಿ ಎಸ್ ಎಲ್ ಭೈರಪ್ಪನವರ ಟ್ವಿಟ್ ವೊಂದು ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಟಕ್ಕೆ ಕಾರಣವಾಗಿದೆ. ಟ್ವಿಟ್ ನಲ್ಲಿ ಎಸ್ ಎಲ್ ಭೈರಪ್ಪನವರು
“ಮಲಬಾರಿನ ಮುಸ್ಲಿಮರು ಮಲೆಯಾಳಂ ಭಾಷೆಯನ್ನು, ತಮಿಳುನಾಡಿನ ಮುಸ್ಲಿಮರು ತಮಿಳನ್ನು ಇಂದಿಗೂ ಮಾತನಾಡುತ್ತಾರೆ; ಆದರೆ ಮೈಸೂರಿನ ಮುಸ್ಲಿಮರು ಇಂದಿಗೂ ಉರ್ದೂ ಮಾತನಾಡುವುದು ಕನ್ನಡದಲ್ಲಿ ಓದಿ ಬರೆಯದೆ ಇರುವುದು, ಟಿಪ್ಪು ಆರಂಭಿಸಿದ ಫಾರ್ಸಿ ಮತ್ತು ಉರ್ದೂ ವಿದ್ಯಾಭ್ಯಾಸ ಪದ್ಧತಿಯಿಂದ.”
ಡಾ. ಎಸ್.ಎಲ್. ಭೈರಪ್ಪ
ಎಂದು ಟ್ವಿಟ್ ಮಾಡಿದ್ದು, ಈ ಟ್ವಿಟ್ ಕಿತ್ತಾಟಕ್ಕೆ ಕಾರಣವಾಗಿದೆ.
ಮುಸ್ಲಿಮ್ ರು ಕನ್ನಡ ಭಾಷೆಯನ್ನು ಚೆನ್ನಾಗಿ ಮಾತಾಡುತ್ತಾರೆ. ಮೈಸೂರಿನ ಮುಸ್ಲಿಂರಿಗೂ ಕನ್ನಡ ಮಾತಾಡಲು ಬರುತ್ತದೆ. ಕನ್ನಡ ಮಾತಾಡುವ ವಿಷಯದಲ್ಲಿ ಮುಸ್ಲಿಮರನ್ನು ಎಳೆದು ತರುವದು ಎಷ್ಟು ಸರಿ ಎಂದು ನೆಟ್ಟಿಗರು ಭೈರಪ್ಪನವರಿಗೆ ಪ್ರತ್ತ್ಯುತ್ತರ ನೀಡಿದ್ದಾರೆ.
ಉತ್ತರ ಕರ್ನಾಟಕದ ಪ್ರದೇಶದಲ್ಲಿ ಟಿಪ್ಪು ಸುಲ್ತಾನ್ ಆಡಳಿತ ಇರಲಿಲ್ಲ, ಆದರೂ ಉರ್ದು ಉಳಿದುಕೊಂಡಿದೆ. ಕಾರಣ ಬೇರೆ ಇರಬಹುದು. ಟಿಪ್ಪು ನನ್ನು ಎಳೆದು ತರುವುದು ಎಷ್ಟು ಸರಿ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು ಕೆಲವರು ಮಲಬಾರ್ ಅನ್ನೋದು ಒಂದು ಪ್ರಾಂತ, ತಮಿಳುನಾಡು ಅನ್ನೋದು ಒಂದು ರಾಜ್ಯ, ಮೈಸೂರು ಅನ್ನೋದು ಒಂದು ನಗರ ಅಥವಾ ಜಿಲ್ಲೆ. ಹೋಲಿಕೆ ಮಾಡುವಾಗ ಒಂದು ಸಮತಲ ಇರಬೇಕಲ್ಲ.
ಟಿಪ್ಪು ಸುಲ್ತಾನ್ ಹುತಾತ್ಮರಾಗಿ 225 ವರ್ಷಗಳೇ ಆಗೋದವು, ನಮ್ಮ ದೇಶಕ್ಕೆ ಸ್ವಾತಂತ್ರ ಬಂದು 77 ವರ್ಷಗಳೇ ಆಗೋದವು ಇಷ್ಟಾದರು ನಿಮಗೆ ಮುಸ್ಲಿಮರ ಬಗ್ಗೆ ಇನ್ನು ಮತ್ಸರ ಉಳಿದಿದೆಯಲ್ಲ ಎಂದು ಉತ್ತರ ನೀಡಿದ್ದಾರೆ.
