ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪ ಗ್ರಾಮದಲ್ಲಿರುವ ಸರ್ಕಾರಿ ಗೋಮಾಳವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಇಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ರು.
ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪದ ಸರ್ವೇ ನಂಬರ 126 ರಲ್ಲಿನ 84 ಎಕರೆ 22 ಗುಂಟೆ ಜಮೀನನ್ನು ಸರ್ಕಾರ ಗೋಮಾಳಕ್ಕೆಂದು ಮಿಸಲಿಟ್ಟಿದೆ. ಹಳ್ಳಿಗಾಡಿನ ದನಕರುಗಳು ಹುಲ್ಲು ಮೇಯಲಿ ಎಂದು ಮಿಸಲಿಟ್ಟ ಜಮೀನಿನಲ್ಲಿ ಕೆಲವರು ಆಕ್ರಮಿಸಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ.
ಗೋಮಾಳ ಪ್ರದೇಶ ಕಣ್ಮರೆಯಾಗಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಗೆ 17-08-2022, 28-06-2023 ಮತ್ತು 03-06-2024 ಹೀಗೆ ಮೂರು ಬಾರಿ ಮನವಿ ಕೊಟ್ಟರು ಅತಿಕ್ರಮಣ ತೆರವುಗೊಳಿಸಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಕೊಟ್ಟ ಮನವಿಯಲ್ಲಿ ಹೇಳಲಾಗಿದೆ.
ಒಂದು ವೇಳೆ ಜುಲೈ 22 ರ ಒಳಗೆ ಅತಿಕ್ರಮಣ ತೆರವುಗೊಳಿಸದೆ ಇದ್ದರೆ ಉಗ್ರ ಪ್ರತಿಭಟನೆ ಮಾಡುವದಾಗಿ ಸೂರಶೆಟ್ಟಿ ಗ್ರಾಮ ಪಂಚಾಯತಿಯ ಪಿ ಡಿ ಓ ಸಹಿ ಮಾಡಿರುವ ಮನವಿ ಪತ್ರ ಇದೀಗ ಬಯಲಾಗಿದೆ. ಸರ್ಕಾರಿ ಗೋಮಾಳ ರಕ್ಷಣೆಗೆ PDO ನಿಂತಿದ್ದು, ಮತ್ತು ತಹಸೀಲ್ದಾರರಿಗೆ ಉಗ್ರ ಪ್ರತಿಭಟನೆಯ ಎಚ್ಚರಿಕೆ ಕೊಟ್ಟಿದ್ದು ಶ್ಲಾಘನೀಯ
