ಧಾರವಾಡದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಾಲೀಕತ್ವದಲ್ಲಿರುವ ಒಟ್ಟು 14 ಮಳಿಗೆಗಳಿದ್ದು, ಅವುಗಳನ್ನು ಬಾಡಿಗೆಗೆ ಕೊಡಲಾಗಿದೆ.
ಧಾರವಾಡದ ಹೃದಯಭಾಗದಲ್ಲಿರುವ ಈ ಮಳಿಗೆಗಳನ್ನು ಅತ್ಯಂತ ಕಡಿಮೆ ಬಾಡಿಗೆಗೆ ನೀಡಿರುವದು ಬೆಳಕಿಗೆ ಬಂದಿದೆ. ಇದರ ಹಿಂದೆ ಈ ಹಿಂದೆ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿದ್ದ ಕೆಲವರು ಲಕ್ಷಾಂತರ ರೂಪಾಯಿ ಕಿಕ್ ಬ್ಯಾಕ್ ಹೊಡೆದಿರುವ ಶಂಕೆ ವ್ಯಕ್ತವಾಗಿದೆ.
ಅವ್ಯವಹಾರದ ನಡೆದಿರುವ ಬಗ್ಗೆ ಈಗಿನ ಸ್ಕೌಟ್ಸ್ ಮತ್ತು ಗೈಡ್ಸ್ ಉಸ್ತುವಾರಿಗಳು ಬಹಿರಂಗಗೊಳಿಸಬೇಕಿದೆ.
ಸ್ಥಳೀಯ ಸಂಸ್ಥೆಗಳಿಗೆ ಆರ್ಥಿಕ ಶಕ್ತಿ ನೀಡಬೇಕಿದ್ದ ಸರಕಾರಿ ವಾಣಿಜ್ಯ ಮಳಿಗೆಗಳು ಮಧ್ಯವರ್ತಿಗಳ ಜೇಬು ತುಂಬುತ್ತಿದ್ದು, ಬಾಡಿಗೆ ಬೊಕ್ಕಸ ಸೇರುವ ಬದಲು ಪರಭಾರೆಯಾಗುತ್ತಿದೆ.
ಧಾರವಾಡದ ಸ್ಕೌಟ್ಸ್ ಮತ್ತು ಗೈಡ್ಸ್ ಗೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾಧಿಕಾರಿಗಳ ಕಣ್ಣಿಗೆ ಮಣ್ಣೇರಚಿ ಈ ಅವ್ಯವಹಾರ ನಡೆತಿದೆಯಾ ಎಂಬ ಅನುಮಾನ ಮೂಡಿದೆ.
ನಿಯಮದ ಪ್ರಕಾರ ಬಾಡಿಗೆ ಕರಾರಿನಲ್ಲಿ ಪ್ರತಿ ವರ್ಷ ಅಥವಾ ಮೂರು ವರ್ಷಗಳಿಗೊಮ್ಮೆ ಮಳಿಗೆ ಹರಾಜು ಪ್ರಕ್ರಿಯೆ ನಡೆಯಬೇಕು. ಆದರೆ ಇಲ್ಲಿ ಹಾಗೆ ನಡೆಯುತ್ತಿಲ್ಲ.
ಕೆಲವರು 35-40 ವರ್ಷಗಳಿಂದ ಅದೇ ಬಾಡಿಗೆಯಲ್ಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ.
ಕಡಿಮೆ ಮೊತ್ತಕ್ಕೆ ಸರಕಾರಿ ಮಳಿಗೆಯನ್ನು ಪಡೆದವರು, ಮತ್ತೊಬ್ಬರಿಗೆ ಹೆಚ್ಚಿನ ಮೊತ್ತ ಬಾಡಿಗೆ ನೀಡುವ ಮೂಲಕ ಮಧ್ಯವರ್ತಿಗಳಾಗಿ ಭರ್ಜರಿ ಹಣ ದುಡಿಯುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
40 ವರ್ಷಗಳಿಂದ ಅಂಗಡಿಕಾರರು ಅದೇ ಬಾಡಿಗೆ ನೀಡುತ್ತಿದ್ದು, ಇನ್ನೂವರೆಗೆ ಬಾಡಿಗೆ ಹೆಚ್ಚಿಸಲಾಗಿಲ್ಲ, ಮುಂದಿನ ಸಭೆಯಲ್ಲಿ ಬಾಡಿಗೆ ಏರಿಸುವ ಮತ್ತು ಮಳಿಗೆ ಹರಾಜು ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಲು ತೀರ್ಮಾನಿಸಲಾಗಿದೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿ ಕರಿಕಟ್ಟಿ ಕರ್ನಾಟಕ ಫೈಲ್ಸ್ ಗೆ ತಿಳಿಸಿದ್ದಾರೆ.
14 ಮಳಿಗೆಗಳಿಂದ ಬರುತ್ತಿರುವ ಬಾಡಿಗೆ ಹಣದ ವಿವರ ಇಲ್ಲಿದೆ.
ಮೂರು ಅಂಗಡಿಗಳನ್ನು ಬಾಡಿಗೆ ಪಡೆದಿರುವ ಸಂಜಯ್ ಮಿಶ್ರಾ ತಿಂಗಳಿಗೆ ಕೇವಲ 60000 ಸಾವಿರ ರೂಪಾಯಿ ಬಾಡಿಗೆ ಕಟ್ಟುತ್ತಾರೆ.
ಕೃಷ್ಣ ಸೋಮನಕೊಪ್ಪ ಎಂಬುವವರ ಹೆಸರಿನಲ್ಲಿ ಒಂದು ಮಳಿಗೆ ಇದ್ದು, ತಿಂಗಳಿಗೆ 5 ಸಾವಿರ ಬಾಡಿಗೆ ಕಟ್ಟುತ್ತಾರೆ.
ಸುರೇಶ ಪೂಜಾರ ಅವರ ಹೆಸರಿನಲ್ಲಿ ಒಂದು ಮಳಿಗೆ ಇದ್ದು, ಅವರು ತಿಂಗಳಿಗೆ 5 ಸಾವಿರ ರೂಪಾಯಿ ಬಾಡಿಗೆ ಕಟ್ಟುತ್ತಾರೆ.
ಶಂಕರ ಕುರ್ಡಿಕೇರಿಯವರ ಹೆಸರಿನಲ್ಲಿ ಒಂದು ಮಳಿಗೆ ಇದ್ದು ಅವರು ತಿಂಗಳಿಗೆ 6 ಸಾವಿರ ರೂಪಾಯಿ ಬಾಡಿಗೆ ಕಟ್ಟುತ್ತಾರೆ.
ಭೋಜರಾಜ್ ಶೆಟ್ಟಿ ಅವರ ಹೆಸರಲ್ಲಿ ಎರಡು ಮಳಿಗೆಗಳಿದ್ದು, ಅವರು ಎರಡು ಮಳಿಗೆ ಸೇರಿ ತಿಂಗಳಿಗೆ 7 ಸಾವಿರದಾ 500 ರೂಪಾಯಿ ಬಾಡಿಗೆ ಕಟ್ಟುತ್ತಾರೆ.
ನರಸಿಯಾಳು ಕಲಕೇರಿ ಅವರ ಹೆಸರಲ್ಲಿ ಒಂದು ಮಳಿಗೆ ಇದ್ದು, ಅವರು ತಿಂಗಳಿಗೆ 5 ಸಾವಿರ ರೂಪಾಯಿ ಬಾಡಿಗೆ ಕಟ್ಟುತ್ತಾರೆ.
ಸತೀಶ ಜೋಶಿ ಹೆಸರಲ್ಲಿ ಒಂದು ಮಳಿಗೆ ಇದ್ದು, ಅವರು ತಿಂಗಳಿಗೆ 5 ಸಾವಿರ ರೂಪಾಯಿ ಬಾಡಿಗೆ ಕಟ್ಟುತ್ತಾರೆ.
ರಾಜು ಪಾಲ್ ಹೆಸರಲ್ಲಿ ಒಂದು ಮಳಿಗೆ ಇದ್ದು, ಅವರು ತಿಂಗಳಿಗೆ 12 ಸಾವಿರ ರೂಪಾಯಿ ಬಾಡಿಗೆ ಕಟ್ಟುತ್ತಾರೆ.
MKB ದೇಸಾಯಿ ಹೆಸರಲ್ಲಿ ಒಂದು ಮಳಿಗೆ ಇದ್ದು, ಅವರು ತಿಂಗಳಿಗೆ 5 ಸಾವಿರ ರೂಪಾಯಿ ಬಾಡಿಗೆ ಕಟ್ಟುತ್ತಾರೆ
ಪ್ರಸನ್ನಾಚಾರ್ಯ ಆಚಾರ್ಯ ಹೆಸರಲ್ಲಿ ಒಂದು ಮಳಿಗೆ ಇದ್ದು, ಅವರು ತಿಂಗಳಿಗೆ 5 ಸಾವಿರ ರೂಪಾಯಿ ಬಾಡಿಗೆ ಕಟ್ಟುತ್ತಾರೆ.
ದೇವರಾಜ ಪಾಟೀಲ ಹೆಸರಲ್ಲಿ ಒಂದು ಮಳಿಗೆ ಇದ್ದು, ಅವರು ತಿಂಗಳಿಗೆ 7 ಸಾವಿರ ರೂಪಾಯಿ ಬಾಡಿಗೆ ಕಟ್ಟುತ್ತಾರೆ.
14 ಮಳಿಗೆಗಳಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಗೆ ಪ್ರತಿ ತಿಂಗಳು 1, 22, 500 ರೂಪಾಯಿ ಮಾತ್ರ ಬಾಡಿಗೆ ಬರುತ್ತಿದೆ. ಇದು ಖಾಸಗಿ ಮಳಿಗೆಗಳಿಂದ ಅತ್ಯಂತ ಕಡಿಮೆ ಬಾಡಿಗೆ ಎನ್ನಲಾಗಿದೆ.
