ಹೆದ್ದಾರಿಗಳಲ್ಲಿ ಟೋಲ್ ವ್ಯವಸ್ಥೆಗೆ ಸಂಬಂದಿಸಿದಂತೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಹತ್ವದ ತೀರ್ಮಾನ ಪ್ರಕಟ ಮಾಡಿದ್ದಾರೆ.
ಹೆದ್ದಾರಿ ಟೋಲ್ ವ್ಯವಸ್ಥೆ ಇನ್ಮೇಲೆ ಇರೋದಿಲ್ಲ ಎಂದು ಅವರು ಹೇಳಿದ್ದಾರೆ. ಟೋಲ್ ಸಂಗ್ರಹ ಮಾಡುವದಕ್ಕೆ ಹೈಟೆಕ್ ಪದ್ಧತಿ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ.
ಎರಡು ತಿಂಗಳ ಅವಧಿಯಲ್ಲಿ ಉಪಗ್ರಹ ಆಧಾರಿತ ಟೋಲ್ ಸಂಗ್ರಹಣೆ ಮಾಡಲಾಗುವದೆಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಟೋಲ್ ಪ್ಲಾಜಾಗಳಲ್ಲಿ ದಟ್ಟನೆ ತಡೆಯುವದು ಇದರ ಹಿಂದಿನ ಉದ್ದೇಶವಾಗಿದ್ದು, ರಾಷ್ಟ್ರದ ಆಯ್ದ ಟೋಲ್ ಪ್ಲಾಜಾಗಳಲ್ಲಿ ಈ ವ್ಯವಸ್ಥೆ ಶೀಘ್ರದಲ್ಲಿ ಜಾರಿಗೆ ಬರಲಿದೆ ಎಂದು ಗಡ್ಕರಿ ತಿಳಿಸಿದ್ದಾರೆ.
