25 ನೇ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಧಾರವಾಡದ ಉಳವಿಚನ್ನಬಸವೇಶ್ವರ ದೇವಸ್ಥಾನದಿಂದ ಕಾರ್ಗಿಲ ಸ್ಥೂಪದವರೆಗೆ ಭಾರತೀಯ ಜನತಾ ಪಕ್ಷದ ಯುವಮೋರ್ಚಾ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು. ಇದೇ ಸಂದರ್ಭದಲ್ಲಿ ಹುತಾತ್ಮ ವೀರಯೋಧರಿಗೆ ಶೃದ್ಧಾಂಜಲಿ ಸಲ್ಲಿಸಿ, ವೀರ ಯೋಧರನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿಮಹಾಪೌರರು ಈರೇಶ ಅಂಚಟಗೇರಿ , ಟಿ.ಎಸ.ಪಾಟೀಲ, ವಿಜಯಾನಂದ ಶೆಟ್ಟಿ,
ಶಕ್ತಿ ಹಿರೇಮಠ , ಬಸವರಾಜ ಗರಗ, ಪವನ ಥಿಟೆ, ರಾಹುಲ ಮಲ್ಲಿಗವಾಡ, ಹಾಗೂ ಯುವಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.
