ಕಳೆದ ಎರಡು ವರ್ಷಗಳಿಂದ ಧಾರವಾಡ ಜಿಲ್ಲಾಧಿಕಾರಿಗಳ ಎಕ್ಸ್ ಅಕೌಂಟ್ ( ಟ್ವಿಟರ್ ) ಸ್ಥಗಿತಗೊಂಡಿದೆ.
ಗುರುದತ್ ಹೆಗಡೆ ಜಿಲ್ಲಾಧಿಕಾರಿಯಾಗಿ ಇರುವವರೆಗೆ ಸಕ್ರಿಯವಾಗಿದ್ದ ಎಕ್ಸ್ ಅಕೌಂಟನಲ್ಲಿ ಜಿಲ್ಲೆಯ ಜನ ದೂರು ದುಮ್ಮಾನಗಳನ್ನು ಡಿ ಸಿ ಗಮನಕ್ಕೆ ತರುತ್ತಿದ್ದರು.
ರಾಜ್ಯದ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳ ಎಕ್ಸ್ (ಟ್ವಿಟರ್ ) ಅಕೌಂಟಗಳು ಸಕ್ರಿಯವಾಗಿದ್ದು, ಧಾರವಾಡ ಜಿಲ್ಲಾಧಿಕಾರಿಗಳ ಖಾತೆ ಜೂನ್ 11, 2022 ರಿಂದ ಸ್ಥಗಿತಗೊಂಡಿದೆ. ಇಷ್ಟು ದಿನ ವಾರ್ತಾ ಇಲಾಖೆಯವರು ಈ ಖಾತೆಯನ್ನು ನಿರ್ವಹಣೆ ಮಾಡುತ್ತಿದ್ದರು. ವಾರ್ತಾ ಸಹಾಯಕ ಸುರೇಶ ಹಿರೇಮಠ ಎಂಬುವವರು ಅಂದಿನ ಜಿಲ್ಲಾಧಿಕಾರಿ ನಿತೀಶ್ ಪಾಟೀಲರ ಅಪ್ತ ಸಹಾಯಕರಾಗಿದ್ದ ವೇಳೆ ಜಿಲ್ಲಾಧಿಕಾರಿಗಳ ಎಕ್ಸ್ ಖಾತೆಯನ್ನು ನಿರ್ವಹಿಸುತ್ತಿದ್ದರು.
ಮನೆಯಿಂದ ಹೊರಗೆ ಬರಲು ಆಗದವರು ಟ್ವಿಟ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದರು. ಧಾರವಾಡ ಜಿಲ್ಲಾಧಿಕಾರಿಗಳ ಹೆಸರಲ್ಲಿ ಖಾತೆ ಇದ್ದು,. ಅದಕ್ಕೆ ಟ್ಯಾಗ್ ಮಾಡಿದರೆ ಉತ್ತರ ಬರುತ್ತಿಲ್ಲ. ಜಿಲ್ಲಾಧಿಕಾರಿ ಖಾತೆ ನಿಂತು ಹೋಗಿದೆ ಎಂದು ಹರೀಶ್ ಕರ್ನಾಟಕ ಫೈಲ್ಸ್ ಗೆ ತಿಳಿಸಿದ್ದಾರೆ.
